‘ಬಯಲೊಳಗಿನ ಬದುಕು’ ಕೃತಿಯು ಮಹೇಶ್ ಬಿ. ಇರಸವಾಡಿ ಅವರ ಕವನಸಂಕಲನವಾಗಿದೆ. ಇಲ್ಲಿ ಕವಿ ನಮ್ಮ ಸುತ್ತಮುತ್ತಣ ರಿಂಗಣಿಸುತ್ತಿರುವ ಹಲವಾರು ಆರ್ಥಿಕ ಅಸಮಾನತೆ, ಮನುಷ್ಯನ ಆಷಾಡಭೂತಿತನ, ಮೂಢನಂಬಿಕೆಗಳ ಖಂಡನೆ, ಪ್ರೀತಿ ಪ್ರೇಮ ಇದೇ ವಿಷಯಗಳನ್ನು ಕವಿತೆಗಳು ಒಳಗೊಂಡಿವೆಯಾದರೂ, ಅವುಗಳನ್ನು ನೋಡುವುದರಲ್ಲಿ, ಪ್ರತಿಮಿಸುವುದರಲ್ಲಿ ಸ್ವೋಪಜ್ಞತೆಯಿದೆ, ಹೊಸತನವಿದೆ. ಇಲ್ಲೇ ಕವಿಯ ಸಾಮರ್ಥ್ಯವಿರುವುದು, ಇಲ್ಲೇ ಕವಿಯ ಪ್ರತಿಭೆಯ ಶಕ್ತಿಯಿರುವುದು. ರೈತನ ನೇಗಿಲು ಮತ್ತು ಕವಿಯ ಲೇಖನಿ ಎರಡೂ ಬೇರೆ. ನೇಗಿಲು ಬೆಳೆಗೆ, ಲೇಖನಿ ಬದಲಾವಣೆಗೆ. ಇಬ್ಬರ ಪರಿಕರ ಬೆರೆಯೇ. ಆದರೆ ಇಲ್ಲದ ಮೂಲಕ ಪರಿಕಲ್ಪನೆ ಒಂದೇ. ಈ ಸಮಾಜದ ಉಬ್ಬುತಗ್ಗುಗಳನ್ನು ಲೇಖನಿ ಹಿಡಿದು ಸಮ ಮಾಡುವ ಕೃಷಿಗೆ ಕೈ ಹಾಕಿರುವ ಮಹೇಶ್ ಬಿ. ಇರಸವಾಡಿ ತನ್ನ ಕಾಲಘಟ್ಟವನ್ನೇ ಮೇಟಿಮಾಡಿಕೊಂಡು ಈ ವ್ಯವಸ್ಥೆಯ ಒಡಬಾಳನ್ನು ಒಕ್ಕಣೆ ಮಾಡಿರುವುದು ಸರಿ ಎನ್ನುತ್ತಾರೆ.