ಬಾವನ್ನ-ಆನಂದ ಝುಂಜರವಾಡ ಅವರ 52 ಕವನಗಳ ಸಂಕಲನವಿದು. ಕವಿಗಳೇ ಹೇಳುವಂತೆ, ಇಲ್ಲಿಯ ಕವನಗಳಲ್ಲಿ ತೀವ್ರ ಸಂಘರ್ಷವಿದೆ. ಒಂದು ಇನ್ನೊಂದಕ್ಕೆ ಹೊರಳಿಕೊಳ್ಳುತ್ತಿರುವ ಹೊತ್ತಿನಲ್ಲಿ, ಒಂದು ಬಿಟ್ಟು ನಡೆದಿದ್ದು, ಮತ್ತೊಂದು ಬಳಿಗೆ ಬರುತ್ತಿರುವುದು. ಈ ಎರಡೂ ಲೋಕದ ಅನೇಕ ರೂಪದ ಪಲ್ಲಟಗಳು ಕವಿತೆಗಳ ಧ್ಯಾನಕೇಂದ್ರಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಡು ಮಾತಿನ ತೀರಾ ಗ್ರಾಮ್ಯ ಭಾಷೆಯಲ್ಲಿ ಜೀವನದ ದ್ವಂದ್ವ, ಗಾಢತೆ, ನಿಗೂಢತೆ ಎಲ್ಲವನ್ನೂ ಕವಿಗಳು ಇಲ್ಲಿ ಕಾವ್ಯವಾಗಿಸಿದ್ದಾರೆ.
ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿ ಕ್ಷೇತ್ರ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ? ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ಇವರ ಬನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. 'ಎಲ್ಲಿದ್ದಾನೆ ಮನುಷ್ಯ' ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ. ...
READ MORE