ಯುವಕವಿ ವಿಶಾಲ್ ಮ್ಯಾಸರ್ ರವರ ಮೊನಚು ಕವಿತೆಗಳ ಪುಸ್ತಕ ಬಟ್ಟೆಗಂಟಿದ ಬೆಂಕಿ. ನಾಡಿನ ಹೆಸರಾಂತ ಕವಿಗಳಾದ ನಾಡೋಜ ಪ್ರೋ. ಬರಗೂರು ರಾಮಚಂದ್ರಪ್ಪರವರ ಮುನ್ನುಡಿ ಈ ಕೃತಿಯಲ್ಲಿದೆ. ಅವರು ಹೇಳುವಂತೆ, ಯುವ ಕವಿ ವಿಶಾಲ್ ಮ್ಯಾಸರ್ ಅವರಿಗೆ ಕಾವ್ಯಾಭಿವ್ಯಕ್ತಿಯ ಆಸಕ್ತಿ ಅಪರಮಿತವಾಗಿದೆ. ಈಗಾಗಿಯೇ ಅವರು ತಮ್ಮ ಪ್ರತಿ ಪದ್ಯದಲ್ಲೂ ತನ್ನಚ್ಛೆಯ ಭಾವ-ಚುಕ್ಕೆಯ ಗುಚ್ಛವನ್ನು ಕಟ್ಟಲು ಹವಣಿಸುತ್ತಾರೆ. ಗುಚ್ಛವೊಂದನ್ನು ಸರಿಯಾಗಿ ಪೋಣಿಸಿ ಕಟ್ಟಿದಾಗ ಹೂಗಳಿಗೆ ತಕ್ಕ ಆಕಾರವು ಒಡಮೂಡುತ್ತದೆ, ಇಲ್ಲದಿದ್ದಾಗ ಗುಚ್ಛವಾಗುವ ಬದಲು ‘ಗುಂಪು’ ಮಾತ್ರವಾಗುತ್ತದೆ. ವಿಶಾಲ್ ಮ್ಯಾಸರ್ರವರಿಗೆ ಕಾವ್ಯ ಯಾವಾಗ ಹುಟ್ಟಬೇಕು ಎಂಬ ವಿವೇಕ ಇರುವುದು ಸಂತೋಷದ ಸಂಗತಿ. ಇಂತಹ ವಿವೇಕವು ಎಲ್ಲಾ ಪ್ರತಿಭೆಗಳನ್ನು ಮುನ್ನಡೆಸುವ ಬೆಳಕಾಗುತ್ತದೆ. ಕತ್ತಲು ಮತ್ತು ಬೆಳಕಿನ ಅನುಸಂಧಾನದಲ್ಲಿ ಬದುಕು ಬೆಳೆಯುತ್ತದೆ. ಹೀಗೆ ಬದುಕನ್ನು ಗ್ರಹಿಸಿದಾಗ ಕವಿಗೆ ಕತ್ತಲಾಗಲಿ, ಬೆಳಕಾಗಲಿ, ಕಾವ್ಯಕ್ಕೆ ತಕ್ಕ ವಸ್ತುವೆ ಆಗುತ್ತದೆ ಎಂದಿದ್ದಾರೆ.
ಕವಿ ವಿಶಾಲ್ ಮ್ಯಾಸರ್ ಮೂಲತಃ ಹೊಸಪೇಟೆಯವರು. ಕತೆ, ಕವನ ಬರೆಯುವುದು ಅವರ ಹವ್ಯಾಸವಾಗಿದೆ. ಹೊಸಪೇಟೆ ವಿಜಯನಗರ ಮಹಾ ವಿದ್ಯಾಲಯದಲ್ಲಿ ಬಿ.ಎಸ್.ಸಿ ವಿದ್ಯಾರ್ಥಿಯಾಗಿರುವ ಅವರು ಹೊಸಪೇಟೆಯ ಬಂಡಾಯ ಸಾಹಿತ್ಯ ಸಂಘಟನೆಯ ತಾಲೂಕು ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ...
READ MORE