ಬಟವಾಡೆಯಾಗದ ರಸೀತಿ

Author : ಲಕ್ಕೂರು ಆನಂದ

Pages 104

₹ 75.00




Year of Publication: 2008
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

ಕವಿ ಲಕ್ಕೂರ್‍ ಆನಂದ ಅವರ ಕವನ ಸಂಕಲನ ’ಬಟವಾಡೆಯಾಗದ ರಸೀತಿ’.

ಅಸಹನೆ, ನೋವು, ಪ್ರೀತಿ, ನಂಬಿಕೆಗಳು ಇವರ ಕವಿತೆಗಳಲ್ಲಿ ವ್ಯಕ್ತವಾಗಿದೆ. ಇಲ್ಲಿನ ಅನೇಕ ಕವಿತೆಗಳಿಗೆ ಅಂತರ್‍ ಸಂಬಂಧವಿದೆ. ನೆಲದ ಕಾವಿನ ಕರುಣೆ, ಉರುಳಿದ ಏಕಾಂತ ಶಬ್ದ ಎಂಬಂತಹ ಶೀರ್ಷಿಕೆಗಳನ್ನು ಗಮನಿಸಬಹುದು. ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು ಎಂದು ನಂಬಿರುವ ಬಯಲ ಕವಿ ಲಕ್ಕೂರು ಆನಂದ. ಕಣ್ಣ ಹರಿಸಿದಂತೆಲ್ಲ ಬೆರಗ ಬಯಲು, ಮೇಲೆ ನಭದಲ್ಲಿ ನಗುವ ನವಿಲು ಎನ್ನುವ ಅವರದ್ದೇ ಕವಿತೆಯ ಸಾಲುಗಳಂತೆ ಕಾವ್ಯದ ಸ್ವರೂಪವನ್ನು ತೆರೆದಿಡುತ್ತದೆ.

About the Author

ಲಕ್ಕೂರು ಆನಂದ

ಲಕ್ಕೂರು ಸಿ. ಆನಂದ ಅವರು ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರಿನವರು. ದಲಿತ- ಬಂಡಾಯ ಕಾವ್ಯ ಮಾರ್ಗದ ಮೂರನೇ ತಲೆಮಾರಿನವರಾದ ಅವರು ಸೃಜನಶೀಲ ಬರಹಗಾರ. ಕವಿ, ವಿಮರ್ಶಕ, ಅನುವಾದಕರಾಗಿಯೂ ಗುರುತಿಸಿಕೊಂಡಿರುವ ಆನಂದ ಅವರ ಮಾತೃಭಾಷೆ ತೆಲುಗು. ಪ್ರಸ್ತುತ ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಲಕ್ಕೂರು ಆನಂದ ಅವರು ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಹಾಗೂ ಒಂದು ಸಂಶೋಧನಾ ಗ್ರಂಥವನ್ನು ಪ್ರಕಟಿಸಿದ್ದಾರೆ. ಮಾತಂಗ ಮಾದಿಗರ ಸಂಸ್ಕೃತಿಯ ಬಗ್ಗೆ ಆನಂದ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ.  ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅತ್ಯುತ್ತಮ ಆತ್ಮ ಕಥೆಗಳೆಂದರೆ, ...

READ MORE

Awards & Recognitions

Reviews

(ಬಟವಾಡೆಯಾಗದ ರಸೀತಿ, ಹೊಸತು 2014,ಪುಸ್ತಕದ ಪರಿಚಯ)

“ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು" ಎಂದು ಈ ಕವನ ಬರೆದಿರುವ ಕವಿ ಲಕ್ಕೂರು ಆನಂದ ನಂಬಿದ್ದಾರಂತೆ. ಹಾಗೆಂದು ಬೆನ್ನುಡಿಯಲ್ಲಿ ಜೋಗಿ ಹೇಳಿದ್ದಾರೆ, ನಿಜ, ಕಾವ್ಯ, ನಮಗೆ ದಕ್ಕಬೇಕಾದರೆ ಇನ್ನರ್ಧ ಬಾಗಿಲನ್ನು ನಾವೇ ತೆರೆದುಕೊಂಡು ಒಳಗೆ ಪ್ರವೇಶಿಸಬೇಕು. ಕವಿತೆಯನ್ನು ಆಸ್ವಾದಿಸುವುದು ಹುಡುಗಾಟದ ಮಾತಲ್ಲ! ಅಲ್ಲಿನ ನೋವು-ನಲಿವು- ಹಾಸ್ಯ-ಸುಖ-ವಾ-ಕೋಪತಾಪಗಳು ಏನೇನಿವೆಯೋ ಎಲ್ಲವನ್ನೂ ನಮ್ಮ ಮಿತಿಯಲ್ಲಿ ಅರ್ಥೈಸಬೇಕು. ಅದರೊಂದಿಗೆ ಜೋಡಿ ನಡಿಗೆ ಜೋಡಿ ನಡಿಗೆ ಹೆಜ್ಜೆಹಾಕಬೇಕು. ಅಲ್ಲಿನ ಒಡಲಾಳವನ್ನು ಗ್ರಹಿಸಬೇಕು. ಇಲ್ಲವಾದಲ್ಲಿ ಅದೊಂದು ಕೇವಲ ಅಕ್ಷರಗಳನ್ನು ಉಚ್ಚರಿಸಿದ ಅರ್ಥಹೀನ ಶಬ್ದಾಡಂಬರವಾದೀತು. ಕವಿ ಹೇಳಿದಂತೆ ಬಟವಾಡೆಯಾಗದ ರಶೀತಿ, ಕಾಗದವಾದೀತು, ತಲಪ ಬೇಕಾದ ಕಡೆ ತಲುಪದೇ ಉಳಿದೀತು. ಬದುಕಿನ ಎಲ್ಲ ರೀತಿಯ ಸೌಂದರ್ಯವನ್ನು ಅವರ ಜೊತೆಗಿರುವ ಕುರೂಪದೊಂದಿಗೆ ಅನುಭವಿಸದ ವಿಧಿ ಇಲ್ಲ ಎಂಬ ಸತ್ಯವನ್ನು ಇಲ್ಲಿ ಕವಿತೆಗಳ ಮೂಲಕ ನಿರೂಪಿಸ ಲಾಗಿದೆ. ಇಲ್ಲಿ ಪ್ರತಿಮೆಗಳ ರೂಪವ ಅಮೂರ್ತ ಕಲ್ಪನೆಯೊಂದರ ಅಭಿವ್ಯಕ್ತಿಯೆಂಬುದು ವಿಶೇಷ. ಜಗತ್ತಿನಿಂದ ಕಾಣೆಯಾಗುತ್ತಿರುವ ಮಾನವೀಯತೆಯ ಹುಡುಕಾಟಕ್ಕೆ ಪ್ರಾಮುಖ್ಯ ನೀಡಿದ್ದೂ ವಿಶೇಷ. ಯಾವುದೋ ಅವ್ಯಕ್ತ ನೋವು ಕವನ ಸಂಕಲನದುದ್ದಕ್ಕೂ ಕಾಡಿ ಕಾಡಿ ತನಗೆ ನೋವಿನದೇ ಮೇಲುಗೈ ಯಾದಂತೆ ಅಸಹಾಯಕತೆಯೊಂದು ನಿಟ್ಟುಸಿರು ಬಿಟ್ಟಂತೆ ಭಾಸವಾಗುವ ಕವಿತೆಗಳು..

Related Books