ಬಲೆಗೆ ಎರಚಿದ ಬಣ್ಣ

Author : ನಿರಂಜನ ತೋಟದಮನೆ

Pages 96

₹ 100.00




Year of Publication: 2021
Published by: ಅಭಿಕ್ಷಾ-ಅಭಿಜ್ಞ ಪುಸ್ತಕ ಪ್ರಕಾಶನ
Address: ತೋಟದಮನೆ, ಬೈಪಾಸ್ ರೋಡ್, ಬ್ರಹ್ಮಸಾಗರ, ಚಿತ್ರದುರ್ಗ-577519
Phone: 9141156320

Synopsys

’ಬಲೆಗೆ ಎರಚಿದ ಬಣ್ಣ’ ನಿರಂಜನ ತೋಟದಮನೆ ಅವರ ಚೊಚ್ಚಲ ಕವನ ಸಂಕಲನ. ಇಡದ ಹೆಜ್ಜೆಯ ಹಿಂದೆ... ಇರುವುದೊಂದೇ ಹೃದಯ ನಾ ಯಾರಿಗಂತ ಕೊಡಲಿ? ಎನ್ನುತ್ತಾ ಕವಿ ತಾಯಿಯ ಪ್ರೀತಿಯ ಕುರಿತು ಕವನಗಳಲ್ಲಿ ವಿವರಿಸುತ್ತಾರೆ. ಕಾವ್ಯವನ್ನು ಮತ್ತು ಅವಳು ಬದುಕಿದ ಕಾವ್ಯವನ್ನು ಅಕ್ಷರದಲ್ಲಿ ಇಳಿಸುವ ಪ್ರಯತ್ನವೇ ಈ ಕೃತಿ. ಕಾವ್ಯ ನನ್ನ ಪಾಲಿಗೆ ಪ್ರೀತಿಸಿ, ಜೀವಿಸಲಾಗದ ಭಾವನದಿ ಎಂದು ಹೇಳುವ ಕವಿ ಇದು ಮುಳುಗಿದಷ್ಟು ಆಳ, ತೇಲಿದಷ್ಟು ಭಾರ, ಹೊಸತನ ಕಾವ್ಯದ ಜೀವರಸವಾಗಿದೆ. ನನ್ನಲ್ಲಿ ಹರಿದಿದ್ದು ಭಾಷೆಯ ನಾಜೂಕು, ಅರ್ಥದ ಬೆರಕೆ, ಹೊಸಪದದ ಹುಡುಕಾಟ, ದಕ್ಕಿಸುವ ಗಂಭೀರತೆ, ಮಾಗುವ ಸಹನೆಯಲ್ಲಿ. ಇವುಗಳ ನಡಿಗೆಯಿಂದ ನಾನು ಕಾವ್ಯದ ಬೆರಳಿಡಿದಿದ್ದೇನೆ ಎಂದು ಕವಿ ಹೇಳಿದ್ದಾರೆ. 

About the Author

ನಿರಂಜನ ತೋಟದಮನೆ

ಲೇಖಕ ನಿರಂಜನ ತೋಟದಮನೆ (ಎನ್.ಎಸ್. ಗಾಣಿಗರ) ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದವರು. ಕೃಷಿ, ಕಾವ್ಯ ವಿಮರ್ಶೆ, ಕಥೆ ಮತ್ತು ರಂಗಭೂಮಿ ಇವರ ಆಸಕ್ತಿ. ಕುವೆಂಪು ವಿವಿಯಲ್ಲಿ ಕನ್ನಡ ಎಂ.ಎ, ರಂಗಮಾಧ್ಯಮದಲ್ಲಿ ಡಿಪ್ಲೊಮಾ ಹಾಗೂ ಬಿ.ಇಡಿ ಪದವೀಧರರು. ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ‘ಆಧುನಿಕ ಕನ್ನಡ ಕಾವ್ಯದಲ್ಲಿ ಕನಸಿನ ಪ್ರತಿನಿಧೀಕರಣ (ಬೇಂದ್ರೆ, ಕುವೆಂಪು ಮತ್ತು ಮಧುರಚೆನ್ನರ ಕಾವ್ಯವನ್ನು ಅನುಲಕ್ಷಿಸಿ)’ ಪಿ.ಎಚ್.ಡಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವೀಧರರು. ಸದ್ಯ ಅಜೀಮ್ ಪ್ರೇಮ್‌ಜಿ ಫೌಂಡೇಷನ್, ಕಲಬುರಗಿಯಲ್ಲಿ ಕನ್ನಡ ತಂಡದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಬಲೆಗೆ ಎರಚಿದ ಬಣ್ಣ ಪ್ರಶಸ್ತಿ-ಪುರಸ್ಕಾರಗಳು: ‘ಪ್ರಜಾವಾಣಿ ದೀಪಾವಳಿ ಕಾವ್ಯ ...

READ MORE

Related Books