ಕವಿ ಹಾಗೂ ಸಾಹಿತಿ ಡಾ. ವಿ.ಕೃ. ಗೋಕಾಕ (ವಿನಾಯಕ) ಅವರ ಕವನ ಸಂಕಲನ-ಬಾಳ ದೇಗುಲದಲ್ಲಿ. ಇಲ್ಲಿ, 43 ಕವನಗಳಿವೆ. ಕೃತಿಯ ಕುರಿತು ಕವಿಯೇ ಹೇಳುವಂತೆ ‘ಬಾಳಿನ ದೃಷ್ಟಿಯನ್ನು ಅಳೆಯಲು ಇಲ್ಲಿ ಪ್ರಯತ್ನಿಸಲಾಗಿದೆ. ಮಗುವಿನಲ್ಲಿ ಆಂಕುರಿಸಿದ ಈ ದೃಷ್ಟಿ ಮುಕ್ತ ಜೀವಿಯ ಪೂರ್ಣ ದೃಷ್ಟಿಯವರೆಗೆ ವಿಕಾಸವಾಗುವ ಬಗೆ ಯಾವುದು? ಈ ವಿಕಾಸಕ್ಕೆ ಅದನ್ನು ಮುಟ್ಟಿಸುವುದು ಯಾವ ಸೋಪಾನ?, ಈ ವಿಧಾನ ನಡೆದಿರುವಾಗ ಮಧ್ಯೆದಲ್ಲಿ ಬರುವ ಬೇರೆ ಭೇರೆ ಅವಸ್ಥೆಗಳು ಯಾವವು? ಬೇರೆ ಬೇರೆ ರಂಗಗಳಲ್ಲಿ ಈ ದೃಷ್ಟಿಯು ಹೇಗೆ ಪ್ರಕಟಗೊಳ್ಳುತ್ತದೆ? ಒಂದೊಂದು ವ್ಯಕ್ತಿತ್ವ ವಿಶೇಷದಲ್ಲಿ ಈ ದೃಷ್ಟಿಯು ಯಾವ ಮಟ್ಟಕ್ಕೆ ಬಂದು ಮುಟ್ಟಿರುತ್ತದೆ? ಹೀಗೆ ಮುಗ್ದತೆಯಿಂದ ಪೂರ್ಣತೆಯವರೆಗಿನ ವ್ಯಕ್ತಿತ್ವದ ಪರಿಗಳನ್ನು ಇಲ್ಲಿ ತೆರೆದು ತೋರಿಸುವ ಪ್ರಯತ್ನವಾಗಿದೆ.
ಈ ರೀತಿಯ ವ್ಯಕ್ತಿತ್ವ-ಮಾದರಿಯ ಸಮ್ಮೀಳನದಿಂದ ಈ ಕೃತಿಯು ಹುಟ್ಟಿದೆ. ನಾನು ಕಂಡು ಅನುಭವಿಸಿದ ವ್ಯಕ್ತಿತ್ವವೇ ಅದರ ಮಾದರಿಯನ್ನುನಾನು ಚಿತ್ರಿಸಲು ಹವಣಿಸುವಂತೆ ಮಾಡಿದೆ. ನಾನು ಮನ ಸೋತ ಮಾದರಿಯೇ ಅದಕ್ಕೆ ಅನುರೂಪವಾದ ವ್ಯಕ್ತಿತ್ವವನ್ನು ತಿಳಿಯುವ ಕಂಣನ್ನು ಕೊಟ್ಟಿದೆ. ಅರ್ಥಾತ್ ಇಲ್ಲಿ ಬರುವ ವ್ಯಕ್ತಿತ್ವಗಳು ಈ ಯುಗವನ್ನು ಹೊಂದಿಕೊಂಡು ನಿಂತಿವೆ. ಚಿರಂತನ ಮಾನವೀಯ ಅನುಭವದಂತೆ ಒಂದು ಯುಗದ ವಿಶೇಷ ಅನುಭವವು ಕಾವ್ಯದ ಅಂಗಗಳಲ್ಲಿ ಒಂದು. ಚಿರಂತನ ತತ್ವ ಸಾರದಂತೆ ಒಂದು ಯುಗದಲ್ಲಿ ತತ್ವವು ಧರಿಸುವ ವಿಶಿಷ್ಟ ರೂಪವು ಕಾವ್ಯದಲ್ಲಿ ಸಹಜವಾಗಿ ಬರುವುದು. ಕುಮಾರಿ, ತಂದೆ, ಹಿಂದೂ ಭಾರತೀಯ, ವಿಜ್ಞಾನಿ, ಸಮತಾವಾದಿ ಇವೇ ಮೊದಲಾದ ಕವನಗಳಲ್ಲಿ ಈ ಯುಗದ ಆವರಣವು ವಿಶೇಷವಾಗಿ ಕಂಡು ಬರುವುದು. ವ್ಯಕ್ತಿತ್ವ-ಮಾದರಿಗಳ ಮಿಲನವೇ ಇಲ್ಲಿಯ ಚಿತ್ರಣದ ತಿರುವು. ಈ ಮಿಲನವು ಬೇರೆ ಬೇರೆ ಬಗೆಯಲ್ಲಿ ಪ್ರಕಟವಾಗುವುದು ಸಹಜ. ಪ್ರಾಯಶಃ ಇಲ್ಲಿಯ ಒಂದೊಂದು ಕವನವು ಒಂದೊಂದು ವಿಧಾನವನ್ನು ಅವಲಂಬಿಸಿದೆ. ಓರ್ವ ವ್ಯಕ್ತಿಯು ತಿಳಿಯಬೇಕಾದ್ದು ಬಾಳನ್ನು. ಬಾಳ ದೇಗುಲದಲ್ಲಿ ಆಡಿ ಮಾತ್ರ ಅವನು ತಿಳಿಯಬಲ್ಲನು. ಆದರೆ, ಅವನು ತಿದ್ದಬೇಕಾದದ್ದು ಅವನ ಬಾಳನ್ನು. ಓರ್ವ ವ್ಯಕ್ತಿಯ ಬಾಳಿನಲ್ಲಿ ಬಾಳಿನ ಅನಂತತೆಯೆಲ್ಲ ಮೂಡುವುದೇ ಅದರ ಪೂರ್ಣತೆಯಾಗಿದೆ. ಈ ಹಾದಿಯಲ್ಲಿ ಈ ಕೃತಿಯು ಒಂದು ದೃಷ್ಟಿಯನ್ನು ದರ್ಶನವನ್ನು ನೀಡುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MORE