ಬಹುರೂಪಿ ’ಬಸುತನಯ’ ಅವರ ಕವನಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಇಟಗಿ ಈರಣ್ಣ ಅವರು, ಕವಿತೆಗಳನ್ನು ಒಂದೇ ಒಂದು ಬೀಸುನೋಟದಲ್ಲಿ ನೋಡಿದರೂ ಅಣವುಗಳು ಮಾಡಿದ ಕೆಲಸಗಳು ಕುರುಡು ಕಣ್ಣಿಗೂ ಕಾಣುವಂತೆ ರಾಚಿಬಿಡುತ್ತದೆ. ಇಲ್ಲಿರುವ ಕವಿತೆಗಳು ಆಂದೋಲನ ಮಾಡಿವೆ. ಸಂಚಲನ ಮೂಡಿಸಿವೆ, ಹೋರಾಟ ಮಾಡಿವೆ. ಎಲ್ಲ ವಯೋಮಾನದವರಲ್ಲೂ ಶಕ್ತಿಯನ್ನು ಬುದ್ದಿಶಕ್ತಿಯನ್ನು ತುಂಬಿ, ಅವ ದೇಹವನ್ನು ಮನವನ್ನು ಅರಳಿಸಿವೆ, ಕೆರಳಿಸುದೆ ಜೊತೆಗೆ ಸಿಡಿದಿವೆ, ಬಡಿದಿವೆ. ಮಾತು ಬಾರದವನಿಗೆ ಸುಂದರ ಮಾತು ಕಲಿಸುವ ಹೇಡಿಯನ್ನು ವೀರವನ್ನಾಗಿಸಿವೆ. ಸ್ವಾರ್ಥಿಯನ್ನು ಮಹದಾನಿಯನ್ನಾಗಿಸಿವೆ. ದಿಕ್ಕಿಲ್ಲದವರಿಗೆ ದಿಕ್ಕನ್ನೂ ಬದುಕಿಲ್ಲದವರಿಗೆ ಬದುಕನ್ನೂ ಕಲಿಸಿ ಕಲ್ಪಿಸಿಕೊಟ್ಟಿವೆ. ಒಡೆದ ಮನಸ್ಸನ್ನು ಒಡೆದ ಸಂಸಾರವನ್ನೂ ಒಡೆದ ಲೋಕವನ್ನು ಒಡೆದ ಜಗತ್ತನ್ನೂ ಒಂದುಗೂಡಿಸಿ, ಎಂದೂ ಬಿಡದ ಬಂಧನದಂತೆ ಈ ಕವಿತೆಗಳು ಪ್ರೀತಿಯನ್ನು ಬೆಸೆದಿವೆ. ಹೊಸೆದಿವೆ. ಬಣ್ಣದ ಮಹಿಮೆ, ನನ್ನ ಚೆಲುವೆ – ಅನ್ನುವ ವಿಚಾರಗಳನ್ನು ಒಳಗೊಂಡ ಕವಿತೆಯ ಸಾಲುಗಳು ಈ ಕವಿಯನ್ನು ಖಂಡಿತವಾಗಿಯೂ ಕವಿಗಳ ಸಾಲಿನಲ್ಲಿ ಕೂರಿಸುವ ಶಕ್ತಿ ಪಡೆದಿವೆ ಎಂದಿದ್ದಾರೆ.
ಲೇಖಕ ಬಸುತನಯ (ಶಿವಾನಂದ ಟವಳಿ) ಧಾರವಾಡದಲ್ಲಿ ಅಧ್ಯಾಪಕರು. ಕೃತಿಗಳು: ಚೆಲುವ ಕನ್ನಡ ನಾಡು (ಮಕ್ಕಳ ಕವಿತೆಗಳು), ಬಹುರೂಪಿ (ಕವನ ಸಂಕಲನ) ...
READ MORE