‘ಬದುಕು ಸೂಜಿ ಮತ್ತು ನೂಲು’ ಕವಿ ಬಿದಲೋಟಿ ರಂಗನಾಥ್ ಅವರ ಕವನ ಸಂಕಲನ. ಇಲ್ಲಿಯ ಕವಿತೆಗಳಲ್ಲಿ ಸಂವೇದನಾಶೀಲತೆಯೇ ಸ್ಥಾಯಿಭಾವ. ಏಕಮುಖಿ ಕಾಣ್ಕೆ ಅಭಿಪ್ರಾಯ ಮತ್ತು ಪೂರ್ವಗ್ರಹಿತಗಳನ್ನು ಕದಲಿಸುವಷ್ಟು ಸಮರ್ಥವಾಗಿರುವ ಕವಿತೆಗಳು ಇಲ್ಲಿ ಸಂಕಲನಗೊಂಡಿದ್ದು, ಅನನ್ಯತೆಯಲ್ಲಿ ತಲೆ ಎತ್ತಿ ನಿಲ್ಲುತ್ತವೆ ಮತ್ತು ಹೊಸ ಸೌಂದರ್ಯದ ಕಲ್ಪನೆಯನ್ನು ಮಂಡಿಸುತ್ತ ಸಾಗುತ್ತವೆ.
ಇಲ್ಲಿಯ ಸಫಲ ರಚನೆಗಳು ನಿರಾಯಾಸ ಕಾಣ್ಕೆಯ ಸ್ಫುಟ ಎಳೆಗಳಿಂದ ಗೊತ್ತು ಪಡಿಸುತ್ತವೆ. ದೇವನೂರು ಮಹಾದೇವ, ಬುದ್ಧ, ಗಾಂಧಿ, ಅಂಬೇಡ್ಕರ್ ಕುರಿತ ಕವಿತೆಗಳು ಹೊಸತಾಗಿ ಕಾಣುತ್ತವೆ. ಇಂಥ ವ್ಯಕ್ತಿ ವಿಶಿಷ್ಟ ಅಥವಾ ವ್ಯಕ್ತಿ ಅನನ್ಯ ಚೇತನಗಳ ಸಂಸರ್ಗಕ್ಕೆ ಬಂದಾಗ ಸಂವೇದನಾ ಶೀಲ ಮನಸ್ಸೊಂದರಲ್ಲಿ ಆಗುವ ಅಸಲಿ ಅನುಭಾವವನ್ನು ಚಿತ್ರಿಸುತ್ತವೆ.
ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ. ...
READ MORE