ಬದುಕು ಭಾವದ ತೆನೆ

Author : ಅಕ್ಷಯ ಆರ್. ಶೆಟ್ಟಿ

Pages 78

₹ 60.00




Year of Publication: 2007
Published by: ತುಡರ್ ಪ್ರಕಾಶನ
Address: 'ತುಡರ್', ಗುರುನಗರ (w), ಕೊಂಚಾಡಿ ಅಂಚೆ, ಮಂಗಳೂರು ತಾಲ್ಲೂಕು, ದ. ಕ. ಜಿಲ್ಲೆ.
Phone: 7760308562

Synopsys

‘ಬದುಕು ಭಾವದ ತೆನೆ’ ಲೇಖಕಿ ಅಕ್ಷಯ ಆರ್. ಶೆಟ್ಟಿ ಅವರ ಕವನ ಸಂಕಲನ. ಈ ಕೃತಿಗೆ ಡಾ. ವಸಂತ ಕುಮಾರ್ ಪೆರ್ಲ ಮುನ್ನುಡಿ ಬರೆದು  ಕವಯಿತ್ರಿ ಸ್ತ್ರೀತ್ವಕ್ಕೆ ಕೊಡುವ ಎತ್ತರದ ಸ್ಥಾನ ಗಮನಾರ್ಹ’ ಎನ್ನುತ್ತಾರೆ. ತನ್ನ ನಿಜದ ನೆಲೆಯ ತಾನರಿವ ಈ ಆತ್ಮವಿಶ್ವಾಸದ ನಿಲುವು ಬಹುಶಃ ಸ್ತ್ರೀವಾದಿ ಚಿಂತನೆಗಿಂತ ದೊಡ್ಡದು ಅನಿಸುತ್ತದೆ. ಬದುಕಿನ ಬಗ್ಗೆ ಶ್ರದ್ಧೆ ಮತ್ತು ಪ್ರೀತಿಯನ್ನು ಇಲ್ಲಿಯ ಕವಿತೆಗಳು ತೋರ್ಪಡಿಸುತ್ತಿರುವುದು ಒಂದು ವಿಶೇಷ ಅಂಶ. ಅಸಮಾನತೆಗಳನ್ನು ಪ್ರಶ್ನಿಸುವಾಗ ಲೇವಡಿಯ ಅಥವಾ ಕಟುಕತೆಯ ನಕಾರಾತ್ಮಕತೆಯಿಂದ ಮನಸ್ಸು ಕಹಿ ಮಾಡಿಕೊಳ್ಳದೆ ವಾಸ್ತವತೆಯ ನೆಲೆಗಟ್ಟಿನಿಂದ ಮಾತಾಡುವ ಧ್ವನಿ ಕಂಡು ಬರುತ್ತದೆ. ಕಾಲದ ಪರೀಕ್ಷೆಯಲ್ಲಿ ಗೆದ್ದು ಉಳಿದುಕೊಂಡು ಬಂದಿರುವ ಸಾಮಾಜಿಕ ಸಂಗತಿಗಳನ್ನು ಸಾರಾಸಗಟಾಗಿ ತಿರಸ್ಕರಿಸದೆ, ಇಂದಿನ ಅರಿವಿನ ವಿವೇಚನೆಯಲ್ಲಿ ಪರಿಶೀಲಿಸಬೇಕೆಂಬ ಎಚ್ಚರ ಅನುದ್ದಿಶ್ಯವಾಗಿಯೇ ಕವಿತೆಗಳ ಶರೀರದಲ್ಲಿ ಆಕೃತಿ ಪಡೆದಿರುವುದು ಗಮನಿಸಬೇಕಾದ ಅಂಶ ಎಂದಿದ್ದಾರೆ ಡಾ. ವಸಂತ ಕುಮಾರ್ ಪೆರ್ಲ.

About the Author

ಅಕ್ಷಯ ಆರ್. ಶೆಟ್ಟಿ

ಲೇಖಕಿ ಅಕ್ಷಯ ಆರ್. ಶೆಟ್ಟಿ ಅವರು ಪ್ರಸ್ತುತ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು.  ಎಂ. ಎ.  ಮತ್ತು ಎಂ. ಬಿ. ಎ.  ಪದವೀಧರರು. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಕ್ಷಯ ಅವರ ಎರಡನೇ ಕವನ ಸಂಕಲನ "ಬದುಕು ಭಾವದ ತೆನೆ "ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ್ದ  'ಸುಶೀಲಮ್ಮ ದತ್ತಿ ನಿಧಿ ಪ್ರಶಸ್ತಿ' ಹಾಗೂ ಇವರ ಕಥೆಗಳಿಗೆ 'ತ್ರಿವೇಣಿ ಧತ್ತಿ ನಿಧಿ ಪ್ರಶಸ್ತಿ' ಮತ್ತು ಸಾಧನಾ ಪ್ರತಿಷ್ಠಾನದ 'ಬಾಂಧವ್ಯ ಪ್ರಶಸ್ತಿ'  ಲಭಿಸಿವೆ. ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಇವರ  'ಹೆಣ್ಣು ಬಂಗಾರದ ಕಣ್ಣು ...

READ MORE

Related Books