‘ಬಾನ ಬಯಲ ಚುಕ್ಕಿಗಳು’ ಕನ್ನಡದ ಹಲವು ಕವಿಗಳು ಬರೆದ ಕವಿತೆಗಳ ಸಂಕಲನ. ಲೇಖಕಿ ವಿಶಾಲ ಆರಾಧ್ಯ ಈ ಕೃತಿಯನ್ನು ಸಂಪಾದಿಸಿದ್ದಾರೆ. ಕಳೆದ 2020ರ ಮಾರ್ಚ್ ತಿಂಗಳಿನಲ್ಲಿ ಕೋವಿಡ್ -19 ಕಾರಣದಿಂದಾಗಿ ಲಾಕ್ ಡೌನ್ ಆದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಿ ನಡೆದವು. ಈ ವೇಳೆ ‘ಅಲ್ಲಮ’ ಬಳಗ ಎಂಬ ಸಾಹಿತ್ಯಿಕ ತಂಡದ ಮೂಲಕ ಹಲವು ಸಾಂಸ್ಕೃತಿಕ, ಸಾಹಿತ್ಯಿಕ ಗೋಷ್ಠಿಗಳು ನಡೆದವು. ಈ ಗೋಷ್ಠಿಗಳಲ್ಲಿ ನೂರಾರು ಹಿರಿ-ಕಿರಿಯ ಕವಿಗಳು ಭಾಗಿಯಾಗಿ ತಮ್ಮ ಕವಿತೆಗಳನ್ನು ವಾಚಿಸಿದರು. ಆ ಕವಿತೆಗಳಲ್ಲಿ ಆಯ್ದ ಕವಿತೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಕನ್ನಡದ ಹೆಸರಾಂತ ಕವಿವರ್ಯರ ಕವಿತೆಗಳನ್ನೊಳಗೊಂಡಂತೆ ಉದಯೋನ್ಮುಖ ಕವಿಗಳ ರಚನೆಗಳೂ ಇಲ್ಲಿವೆ. ಜೊತೆಗೆ ಇಲ್ಲಿನ ಒಂದೊಂದು ಕವಿತೆಗಳೂ ವಿಶಿಷ್ಟವಾಗಿವೆ.
ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿ. ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರು. ಶಿಕ್ಷಕ ತರಬೇತಿ ಪೂರ್ಣಗೊಳಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ತಮ್ಮ ಉತ್ತಮ ಸೇವೆಯಿಂದಾಗಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ಕವನ ಕತೆಗಳನ್ನು ಬರೆವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ...
READ MORE