ಬಾಳು ಬಾಳದೇ ಬಿಡದು

Author : ಸುನೀಲ್ ಹಳೆಯೂರು

Pages 112

₹ 80.00




Year of Publication: 2018
Published by: ಹೆಮ್ಮರ ಪ್ರಕಾಶನ
Address: #309, 10ನೇ ಮುಖ್ಯರಸ್ತೆ, ಮೃತ್ಯುಂಜಯ ನಗರ, ಬೆಂಗಳೂರು-560010
Phone: 919620000280

Synopsys

'ಬಾಳು ಬಾಳದೇ ಬಿಡದು' ಸುನೀಲ್ ಹಳೆಯೂರು ಅವರ ಕವನ ಸಂಕಲನ. ಇಲ್ಲಿ ಒಟ್ಟು 73 ಕವನಗಳಿವೆ. ಪ್ರಕೃತಿ, ಬದುಕು, ಪ್ರೀತಿ, ಕನಸು, ದೇವರು, ಸ್ನೇಹ, ಭಾಷೆ, ಸಂಬಂಧಗಳು, ಅಮ್ಮನ ನೆನಪು ಹೀಗೆ ಎಲ್ಲವೂ ಕವನದ ವಸ್ತುಗಳಾಗಿವೆ. 

"ಕಾಲಗರ್ಭದ ಬೆಳಕು ಕತ್ತಲೆಯ ಒಳಗೊಳಗೆ ಹುಟ್ಟಿಕೊಂಡ ಭಾವದೊಳಗಿನ ಕಣ್ಣುಗಳು ಕಾವ್ಯದ್ದೋ ಕಲ್ಲಿನದ್ದೋ ! ?" ಎಂದು ಪ್ರಶ್ನಿಸುತ್ತಾರೆ.  ‘ನೆನಪುಗಳೇ ಹೀಗೆ’ ಕವನದಲ್ಲಿ, ಹಳೆಯ ನೆನಪುಗಳ ಬೆನ್ನುಡಿಯೂ,‌ ಹೊಸ ಬದುಕಿನ ಮುನ್ನುಡಿಯೂ ಹೇಗೆ ಈ ದಿನದ ಸೇತುವೆಯಾಗಿದೆ ಎನ್ನುತ್ತಾರೆ. ‘ಬದುಕು ಬುಗುರಿಯಾಟ’ ಕವನದಲ್ಲಿ ಕಾಲಚಕ್ರದ ಜೊತೆಯಾಟದಲ್ಲಿ ಮಾನವನೇ ಬುಗುರಿಯಾಗುವ ಪರಿ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ.‘ಜೇಡದ ಜಾಡು ಹಿಡಿದು* ಕವನದಲ್ಲಿ ಕವಿಯು ಮನುಜನ ಮನಸನ್ನು ಜೇಡನ ಬಲೆಗೆ ಹೋಲಿಸಿ, ಕೊನೆಗೆ ಅದರಿಂದ ಹೊರಬರುವ ಉಪಾಯವನ್ನೂ ಸೂಚಿಸಿರುವುದು 

ನೆನಪುಗಳನ್ನು ‘ಭಾವಗುಬ್ಬಿ’ ಗೆ ಹೋಲಿಸಿದ್ದರೆ, ‘ಜೀವನವೆಂದರೇ ಹೀಗೆಯೇ* ಎಂಬ ಕವನದಲ್ಲಿ ಜೀವನವೆಂಬುದು ಬಣ್ಣದ ಹೊದಿಕೆಯೊಳಗೆ ಮುಚ್ಚಿಟ್ಟ ಪುಸ್ತಕ ಎಂದು ವ್ಯಾಖ್ಯಾನಿಸಿದ್ದಾರೆ. ‘ಪಯಣ’ ದಲ್ಲಿ "ಕಗ್ಗತ್ತಲ ಮನೆಯಲ್ಲಿ ಹಣತೆ ಹಚ್ಚಿದಂತೆ ಹೊಸ ಹುರುಪು ಮೂಡಿದೆ ಎದೆಯ ಗೂಡಿನಲಿ" ಎಂಬ ಸಾಲುಗಳಲ್ಲಿ ಜೀವನದ ಸಾಫಲ್ಯವನ್ನು ನೋಡಬಹುದು. ಸೀತೆಯ ಅಂತರಂಗ, ಕತ್ತಲು -ಬೆಳಕು, ದೀಪ ದಾರಿಗಳು, ಜೀವ ಸಂವಾದ, ಪರಪಂಚ, ನಾನು ನೀನು ಕವನಗಳು ಮನಸೆಳೆಯುತ್ತವೆ. 

 

About the Author

ಸುನೀಲ್ ಹಳೆಯೂರು
(11 June 1977)

ಸುನೀಲ್ ಹಳೆಯೂರು, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕಿನ ಹಳೆಯೂರು ಗ್ರಾಮದವರು.1977ರ ಜೂನ್ 11ರಂದು ಜನನ. ತಂದೆ ಹಿರಣ್ಣಯ್ಯ, ತಾಯಿ-ಪ್ರಭಾವತಿ. ಬಿ.ಕಾಂ ಪದವೀಧರರು. ಬೆಂಗಳೂರಿನ ಖಾಸಗಿ ಕಂಪನಿಯ ಮಾಋಆಟ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಬಾಳು ಬಾಳದೇ ಬಿಡದು (ಕವನ ಸಂಕಲನ), ನವ್ಯಜೀವಿ (ಮುಕ್ತಕಗಳ ವ್ಯಾಖ್ಯಾನ) ಇವರ ಕೃತಿಗಳು.  ...

READ MORE

Related Books