ಬಾಗೂರು ಮಾರ್ಕಾಂಡೇಯ ಅವರ ಕವಿತೆ ಸುಮಧುರ ಭಾವಗೀತೆ -ಈ ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಕವಿ ಬಾಗೂರು ಅವರು ಸಮಗ್ರ ಗೀತೆಗಳ ಸಂಕಲನ. 324 ಭಾವಗೀತೆಗಳನ್ನು ತನ್ನ ಒಡಲಲ್ಲಿಇಟ್ಟುಕೊಂಡಿದೆ. ಬಹುತೇಕ ಭಾವಗೀತೆಗಳು ಸಂಗೀತ ನಿರ್ದೇಶಕರು ಹಾಗೂ ಗಾಯಕರಿಂದ ಹಾಡುಗಳಾಗಿ ಹೊರಹೊಮ್ಮಿವೆ. ದೇಶಭಕ್ತಿ, ನಾಡಗೀತೆ, ಪ್ರೀತಿ, ಪ್ರೇಮ, ಸಾಮಾಜಿಕ ಕಾಳಜಿಯ ಕವಿತೆಗಳೂ ಈ ಕೃತಿಯಲ್ಲಿ ಅಡಕವಾಗಿವೆ.
ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ, ಚೈತ್ರ ಚೆಲುವು, ಸುವರ್ಣಪುತ್ಥಳಿ, ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...
READ MORE