ಅವ್ವ

Author : ಸರಜೂ ಕಾಟ್ಕರ್‌

Pages 84

₹ 60.00




Year of Publication: 2001
Published by: ಲೋಹಿಯಾ ಪ್ರಕಾಶನ
Address: ಬೆಂಗಳೂರು

Synopsys

‘ಅವ್ವ’ ಸರಜೂ ಕಾಟ್ಕರ್‌ ಅವರ ಕವನಸಂಕಲನವಾಗಿದೆ. ಇಲ್ಲಿನ ಕವಿತೆಗಳಲ್ಲಿ ಸರ್ವನಾಶದ ದಾರಿ ಹಿಡಿದಿರುವ ಯುದ್ಧಕೋರರ ಬಗ್ಗೆ, ಬಾಳ್ವೆಯನ್ನು ಕೈಯಾರೆ ಹಾಳುಗೆಡವಿದ ಶಕ್ತಿಗಳ ವಿರುದ್ಧ ಧ್ವನಿಯನ್ನು ಈ ಸಂಕಲನದಲ್ಲಿ ತಿಳಿಸಿದ್ದಾರೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Reviews

 ಹೊಸತು-2002- ಫೆಬ್ರವರಿ

ಕನ್ನಡ-ಮರಾಠಿ ದಲಿತ ಸಾಹಿತ್ಯ ಸಂಶೋಧಕರಾಗಿ ಡಾಕ್ಟರೇಟ್ ಪಡೆದಿರುವ ಡಾ|| ಸರಜೂ ಕಾಟ್ಕರ್ ಕವಿತೆಗಳನ್ನು ತಾಯಿಯಂತೆ ಪ್ರೀತಿಸಿ ಗೌರವಿಸುವವರು ಮಾತ್ರವಲ್ಲ, ತಮ್ಮ ಕವಿತೆಗಳಿಗೂ ತಾಯಿ ಪ್ರೀತಿಯನ್ನು ತೋರಿದವರು. ಪ್ರಧಾನಿ ವಾಜಪೇಯಿಯವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಶ್ರೇಯಸ್ಸು ಇವರಿಗಿದೆ. ಇಲ್ಲಿನ ಕವಿತೆಗಳಲ್ಲಿ ಸರ್ವನಾಶದ ದಾರಿ ಹಿಡಿದಿರುವ ಯುದ್ಧಕೋರರ ಬಗ್ಗೆ, ಬಾಳ್ವೆಯನ್ನು ಕೈಯಾರೆ ಹಾಳುಗೆಡವಿದ ಶಕ್ತಿಗಳ ವಿರುದ್ಧ ಧ್ವನಿಯಿದೆ.

 

Related Books