ಅಕ್ಷಯ ಕಾವ್ಯದಂತಹ ಸುದೀರ್ಘ ಕಾವ್ಯವನ್ನು ಓದುಗರಿಗೆ ಪರಿಚಯಿಸಿದ್ದ ಲೇಖಕರು ಈ ಬಾರಿ ಅವ್ಯಯ ಕಾವ್ಯದ ಮೂಲಕ ವಿಶಿಷ್ಟ ಸಂವೇದನೆಗಳು, ಎಲ್ಲೋ ನೋಡಿದ ದೃಶ್ಯಗಳು, ವಿವಿಧ ಚಿಂತಕರ, ಕವಿಗಳ, ನಾನಾ ಸಿದ್ಧಾಂತಿಗಳ ವಾಕ್ಯಗಳು, ಯಾವುದೋ ಪರಿಸರ ಚಿತ್ರ ಹೀಗೆ ವಿಭಿನ್ನವಾದ ವಸ್ತು ವಿಷಯಗಳನ್ನು ಬಳಸಿಕೊಂಡು ಕಾವ್ಯ ರಚಿಸಿದ್ದಾರೆ. ಕಾವ್ಯೇತರ ವಸ್ತುಗಳೊಂದಿಗೆ ಕಾವ್ಯವಸ್ತುವನ್ನು ಕೂಡಿಸಿ ಹೊಸ ಬಗೆಯ ಕಾವ್ಯವನ್ನು ರಚಿಸಿದ್ದಾರೆ.
ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...
READ MORE