ಅವಳು ಎಲ್ಲಿಹಳು? -ಕವಿ ಬಾಗೂರು ಮಾಕಾಂಡೇಯ ಅವರು ಬರೆದ 98 ಕವನಗಳಸಂಕಲನ. ಡಾ. ಬೈರಮಂಗಲ ರಾಮೇಗೌಡ ಬರೆದ ಮುನ್ನುಡಿಯಲ್ಲಿ‘ ಇಲ್ಲಿಯ ಕವಿ ಸಂತೆಯೊಳಗೊಬ್ಬ ಸಂತನನ್ನು ನೆನಪಿಸುವ ಭಾವಜೀವಿ. ಅವರು ಆಲೋಚಿಸುವುದು ಪದ್ಯರೂಪದಲ್ಲೋ ಅಥವಾ ಅನುಭವದ ಉತ್ಕಟತೆಯೇ ಹಾಡಾಗಿ ಬರಲು ತುಡಿಯುತ್ತದೋ... ಎರಡೂ ಸರಿ ಇರಬಹುದು ಎಂದು ಹಾಡಲೂ ಬರುವ ಇಲ್ಲಿಯ ಬಹುತೇಕ ಕವನಗಳ ಕುರಿತು ಪ್ರಶಂಸಿಸಿದ್ದಾರೆ.
‘ಕಾಡಲೆಂದೇ ಜನ್ಮತಾಳಿ ಕಾಯುತಿಹರು ಹಲವರು ಕಾಪಿಡಲು ಪ್ರೀತಿದೋರಿ ಸಲಹುತಿಹ ಸೃಜನರು ’ಎಂದು.... ಕವಿತೆಯೊಂದು ಆಂತರ್ಯದ ನೋವನ್ನು ದಾಖಿಲಿಸುವ ಬಗೆ ವಿಭಿನ್ನವಾಗಿದೆ... ಇಂಥ ಅನೇಕ ಕವಿತೆಗಳು ಓದುಗರನ್ನು ಬೆರಗುಗೊಳಿಸುತ್ತದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಕವಿ, ಕಲಾವಿದ, ಬಾಗೂರು ಮಾರ್ಕಾಂಡೇಯ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (ಜನನ: 28-06-1966) ಬಾಗೂರು ಗ್ರಾಮದವರು. ಪರಿಸರ, ಮಕ್ಕಳ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಸುಮಾರು 54ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ, ಬೇರುಗಳು ಚಿತ್ರ ಸರಣಿ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿದವರು, ‘ರೇಖೆಗಳಲ್ಲಿ ಭಾವಗೀತೆಗಳು’ ಮೂಲಕ ನೂತನ ಪ್ರಯೋಗಶೀಲತೆ ರೂಢಿಸಿಕೊಂಡವರು. ಕನ್ನಡದ ಸುಲಭ ಕಲಿಕೆಗೆ “ಕನ್ನಡ ಸೌರಭ” ತಂತ್ರಾಂಶ ತಯಾರಿಸಿದ್ದಾರೆ. “ಬಾಗೂರು ಕಲಾ ವೇದಿಕೆ ಟ್ರಸ್ಟ್” ರಚಿಸಿಕೊಂಡು ‘ಕಲಾ ಭೂಷಣ’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಕವನ ಸಂಕಲನಗಳು: ರೇಖಾಂತರಂಗದ ಭಾವಗುಸುಮ, ಭಾವಶಿಲ್ಪ, ಭಾವೋನ್ಮಾದಿನಿ, ಭಾವಸಮ್ಮಿಲನ, ಕೊಳಲದನಿ, ಕಾವ್ಯಕನ್ನಿಕೆ, ಚೈತ್ರ ಚೆಲುವು, ಸುವರ್ಣಪುತ್ಥಳಿ, ಸ್ವರಸಿರಿಯ ಸ್ನೇಹಲತೆ, ರಾಧಾ ಮಾಧವರ ಒಲುಮೆ ...
READ MORE