’ಅವಳೊಲವ ಮುಳ್ಳುಗಳು’ ಭೀಮ್ಚಂದ್ ಎ. ಡಂಗೇರ್ ಅವರ ಕವನ ಸಂಗ್ರಹ . ಪಾಳು ಬಿದ್ದ ಎದೆಗೋಡೆಯ ಪ್ರೀತಿ ಚಿತ್ರಗಳು ಎಂಬ ಅಡಿ ಬರಹ ಹೊಂದಿರುವ ಈ ಸಂಗ್ರಹದಲ್ಲಿ 69 ಕವನಗಳನ್ನು ಸಂಕಲಿಸಿದ್ದಾರೆ.
ಕವನ ಸಂಕಲನದ ಶೀರ್ಷಿಕೆ ಹಾಗು ಅದರ ಅಡಿ ಬರಹವೇ ಕವನಗಳ ಸ್ಥೂಲ ಲಕ್ಷಣಗಳನ್ನು ಸೂಚಿಸುತ್ತದೆ. ಪ್ರೀತಿಯಲಿ ನೊಂದು ಒಂಟಿಯಾದ ಹೃದಯದ ಸಣ್ಣ ನಿಡುಸುಯ್ಲುಗಳು ಇವು.
ಇಲ್ಲಿನ ಪ್ರೀತಿ ಸಂಪೂರ್ಣ ಲೌಕಿಕದ್ದು. ಸಹಜ ಆಕರ್ಷಣೆಗೆ ಒಳಗಾದ ಹರೆಯದ ಅವಸರ ಒಂದು ಹಂತದಲ್ಲಿ ಭಗ್ನತೆಯ ಮುಳ್ಳು ಚುಚ್ಚಿದಾಗ ಅನುಭವಿಸುವ ನೋವಿನ ಬಿಕ್ಕುಗಳನ್ನ ಭೀಮಚಂದ್ ಅವರು ಬಿಡಿ ಬಿಡಿ ಕವನಗಳಾಗಿಸಿದ್ದಾರೆ.