`ಅವಳ ಹೆಸರು' ಕೆ.ಎಸ್. ಸಚ್ಚಿದಾನಂದ ಅವರ ಕವನ ಸಂಕಲನವಾಗಿದೆ. ಸಚ್ಚಿದಾನಂದರವರು 50 ವರ್ಷಗಳ ಹಿಂದೆ ಅವರು ಓದುತ್ತಿದ್ದ ಕಾಲದಲ್ಲಿ ನೋಡಿದ ಒಬ್ಬ ಹುಡುಗಿಯಿಂದ ಪ್ರಭಾವಿತರಾಗಿ 'ಅವಳ ಹೆಸರು' ಎಂಬ ಐದು ಪದ್ಯಗಳನ್ನು ಬರೆದಿದ್ದರು. ನಂತರ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದುದರಿಂದ ಅವರಿಂದ 50 ವರ್ಷಗಳು ಕಾವ್ಯ ರಚನೆ ಸಾಧ್ಯವಾಗಿರಲಿಲ್ಲ. ಆಮೇಲೆ ಬರೆದ ಕವನದ ಸಂಕಲನವೂ 'ಅವಳ ಹೆಸರು' ಶೀರ್ಷಿಕೆಯದ್ದೇ. ಸಚ್ಚಿದಾನಂದರವರಿಗೆ ಭಾಷೆಯ ಮೇಲೆ, ಆಯದ ಮೇಲೆ ಹಿಡಿತವಿದೆ. ಅನುಭವಕ್ಕೆ ತಕ್ಕ ಅಭಿವ್ಯಕ್ತಿ ಇದೆ, ಕವಿಯಾದವನಿಗೆ ಅಂತಃಕರಣ, ಪ್ರೀತಿ, ಮಮತೆ, ಅನುಕಂಪ ಇರಬೇಕು. ಈ ಕವನ ಸಂಕಲನದಲ್ಲಿ ಈ ಭಾವನೆಗಳನ್ನು ಬಿಂಬಿಸಿರುವುದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಕೆ.ಆರ್.ಪ್ರೇಮಲೀಲಾ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಸಚ್ಚಿದಾನಂದ ಕೆ.ಎಸ್ ಅವರು ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಯಾದ ಬಿ.ಇ.ಎಂ.ಎಲ್ ನಲ್ಲಿ ಮೂವತ್ತು ವರ್ಷಗಳ ದೀರ್ಘ ಸೇವೆಮಾಡಿ ಡೆಪ್ಯುಟಿಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ರಚಿಸಿದ ಅವರ ಚೊಚ್ಚಲ ಕೃತಿ. ಕೃತಿ: ಅವಳ ಹೆಸರು ...
READ MORE