ಹಿರಿಯ ಕವಿ-ಚಿಂತಕ ಡಾ. ಕೆ.ವಿ. ತಿರುಮಲೇಶ ಅವರ ಕವನ ಸಂಕಲನ-ಅವಧ. ಇವರ ಮೊದಲ ಕವನ ಸಂಕಲನ -‘ಮುಖವಾಡ’ ದಿಂದ ಈವರೆಗೂ ಅಂದರೆ ‘ಅವಧ’ ವರೆಗೂ ತಮ್ಮದೇ ಆದ ಪ್ರತ್ಯೇಕ ಮಾರ್ಗವನ್ನು ಕಾವ್ಯದಲ್ಲಿ ಕಂಡುಕೊಳ್ಳುತ್ತಾ ನಡೆದಿರುವ ಕವಿಯು, ತಮ್ಮ ದೃಷ್ಟಿಕೋನಗಳನ್ನು ಸ್ಪಷ್ಟವಾಗಿ ಒಳಗೊಂಡಿದೆ. ತಮ್ಮದೇ ಶೈಲಿಯೊಂದಿಗೆ ಇಲ್ಲಿಯ ಕವನಗಳು ಆಕರ್ಷಿಸುತ್ತವೆ. ಸಂಕೇತಗಳು, ನಿರೂಪಣಾ ಶೈಲಿ, ಸಂಕೀರ್ಣತೆಯನ್ನು ಜೀವಾಳವಾಗಿಸಿಕೊಂಡಿವೆ. ಕವಿಗಳು ತಮ್ಮ ಎಂದಿನ ಚಿಂತನೆಯಂತೆ ಇಲ್ಲಿಯ ಕವಿತೆಗಳಲ್ಲೂ ವಾಸ್ತವಿಕತೆ ಹಾಗೂ ಅನುಭವಕ್ಕೆ ಹೆಚ್ಚು ಒತ್ತು ನೀಡಿ, ಬದುಕಿನ ಶೋಧನೆಗೆ ತೊಡಗುವುದು ಕಾವ್ಯಗಳ ಹುಮ್ಮಸ್ಸು. ಹಾಗೆಯೇ, ಇವರ ಕವನಗಳಲ್ಲಿ ಎಂದಿನಂತೆ ಮೊನಚು, ಅಣಕ, ವ್ಯಂಗ್ಯವಿದೆ. ಈ ಪುಸ್ತಕದಲ್ಲಿ ಬಫೂನನ ತಲೆಯೊಳಗೆ, ಗೋಮತಿಯ ತೀರದಲ್ಲಿ, ಪರಕಾಯ ಪ್ರವೇಶ, ರಾಜಮಾರ್ಗ ಮುಂತಾದವು
ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...
READ MORE