‘ಅಶಾಂತ ಮಣಿಪುರ’ ಸಾವಿತ್ರಿ ಮುಜುಮದಾರ ಅವರ ಕವನ ಸಂಕಲನವಾಗಿದೆ. ಕೃತಿಯ ಕುರಿತು ಬರೆದಿರುವ ಅವರು 'ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಆದಿವಾಸಿಗಳು ವಾಸವಾಗಿದ್ದು ಜನಸಂಖ್ಯೆಯ ಮೂವತ್ತಾರು ಪ್ರತಿಶತ ಇದ್ದಾರೆ. ಬಡತನ ಮತ್ತು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನೆಲೆಯಿಲ್ಲದ ಬದುಕು ಇವರದ್ದಾಗಿದೆ. ಇಲ್ಲಿಯ ಕುಕಿ, ನಾಗಾ ಮುಂತಾದ ಮೂವತ್ತು ಮೂರು ಆದಿವಾಸಿ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ದೊರೆತಿದೆ. ಭೂ ಸುಧಾರಣೆ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಈ ಆದಿವಾಸಿಗಳಿಗೆ ಕೆಲವು ಸವಲತ್ತುಗಳು ದೊರೆತಿವೆ. ಈ ಆದಿವಾಸಿಗಳು ರಾಜ್ಯದಲ್ಲಿ ಎಲ್ಲಿಯಾದರೂ ಭೂಮಿ ಖರೀದಿಸಬಹುದು ಹಾಗೂ ಅಂಗಡಿ ಮುಂಗಟ್ಟು ನಡೆಸಬಹುದು. ಮನೆಮಾಡಿಕೊಳ್ಳಬಹುದು, ಆಸ್ತಿ ಗಳಿಸಬಹುದು. ಸಂವಿಧಾನದ 5 ಮತ್ತು 6 ನೆಯ ಅನುಸೂಚಿಯ ಪ್ರಕಾರ ಆದಿವಾಸಿಗಳಿಗೆ ಈ ಸವಲತ್ತುಗಳು ಲಭ್ಯವಾಗಿವೆ. ಆದಿವಾಸಿಗಳು ಹೆಚ್ಚಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಚರ್ಚ್ಗಳನ್ನು ಕಟ್ಟಿಕೊಂಡು ಧರ್ಮಪಾಲನೆ ಮಾಡುತ್ತಿದ್ದಾರೆ. 1990ರಲ್ಲಿ ಕುಕಿ ಮತ್ತು ನಾಗಾ ಆದಿವಾಸಿಗಳ ನಡುವೆ ಘರ್ಷನೆ ನಡೆದು ಹಿಂಸಾತ್ಮಕ ಸ್ವರೂಪವನ್ನು ಪಡೆದು ಮೂರನೂರಾ ಐವತ್ತು ಕುಕಿ ಹಟ್ಟಿಗಳು ಧ್ವಂಸವಾಗಿದ್ದವು ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು' ಎಂದಿದ್ದಾರೆ,
ಸಾವಿತ್ರಿ ಮುಜುಮದಾರ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ಚಿಂತಕಿ, ಲೇಖಕಿ, ಕವಯತ್ರಿ ಹಾಗೂ ಸಮಾಜಿಕ ಹೋರಾಟಗಾರ್ತಿಯಾಗಿ ಹೆಸರಾದವರು. ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಸಿಂಡಿಕೇಟ್ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಹವ್ಯಾಸ ಇವರದು. ʻಹೆಣ್ಣು ಹೆಜ್ಜೆʼ ಅಂಕಣ ಬರಹಕ್ಕೆ 6ನೇ ದಲಿತ ಸಾಹಿತ್ಯ ಸಮ್ಮೇಳನದ ʻಪುಸ್ತಕ ಪ್ರಶಸ್ತಿʼ ಲಭಿಸಿದೆ. ಕೃತಿಗಳು: ʻಹೆಣ್ಣು ಹೆಜ್ಜೆʼ (ಅಂಕಣ ಬರಹ), ನಾರಿಪದ್ಯ (ಕವನ ಸಂಕಲನ) ...
READ MORE