ಜೀವರಾಜ ಹ ಛತ್ರದ ಅವರ ಕವನ ಸಂಕಲನ ’ಅಸಲಿ ಮಳೆ’ . ಕೊರೋನಾ ಮಾರಿಯ ಬಗ್ಗೆ ಕವಿತೆಗಳನ್ನು ರಚಿಸಿದ್ದಾರೆ. ದುಡಿಮೆಯಿಲ್ಲದೆ ನಿತ್ಯವೂ ಭಾನುವಾರ ನಮಗೆ ಎಂದು ಹೇಳಿಕೊಂಡಿದ್ದಾರೆ. ಕೊರೊನಾ ಕರ್ಫ್ಯೂ ಹಿಂದೆ ಎಂಥ ನೋವಿದೆ, ದೇಶದ ಆರ್ಥಿಕತೆ ಪಾತಾಳಕ್ಕೆ ಹೋಗಿದೆ ಎನ್ನುವ ತೋಳಲಾಟವನ್ನು ಹೇಳಿಕೊಂಡಿದ್ದಾರೆ. ಹೆಣ್ಣು ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎಂದ ಶರಣರ ನುಡಿ ಪ್ರತಿಪಾದಿಸಿ, ‘ಕವಿ ಮತ್ತು ಕವಿತೆ”ಯಲ್ಲಿ ಹೆಣ್ಣಿನ ಭ್ರೂಣ ಹತ್ಯೆಯನ್ನುಪ್ರತಿಭಟಿಸುತ್ತಾರೆ. ಗ್ರಾಮೀಣ ಪರಿಸರದಿಂದ ಬಂದ ಬಹಳಷ್ಟು ಯುವ ಬರಹಗಾರರಿಗೆ ಬರವಣಿಗೆಯ ಬದುಕಿನಲ್ಲಿ ತುಡಿತವಿದೆ ಎನ್ನುವ ಅಂಶವನ್ನು ಪ್ರಸ್ತಾಪಿಸಿದ್ದಾರೆ ಬಳೆಗಾರ, ನಮ್ಮ ಹಳ್ಳಿ ನಮಗ ಪಾಡ, ಹಳ್ಳಿ ಸ್ವರ್ಗ, ಮರಳಿ ಹಳ್ಳಿಗೆ ಮುಂತಾದ ಕವಿತೆಗಳಲ್ಲಿ ಗ್ರಾಮೀಣ ಬದುಕನ್ನು ಪ್ರೀತಿಯ ಚಿತ್ರಣವಿದೆ.
ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು. ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು) ...
READ MORE