ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಆನಂದ ಫ. ದೊಡ್ಡಕುರಬರವರ "ಅರಳುವ ಮೊಗ್ಗುಗಳು - ಒಂದು ಹೊಸತನದ ಕವನ ಸಂಕಲನ. ಈಗಾಗಲೇ “ಕಾವ್ಯ ಸ್ಪೂರ್ತಿ” ಹಾಗೂ “ಬರಡಾದೀತೆನ್ನ ಮನ" ಎಂಬೆರಡು ಕವನ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕಾವ್ಯ ರಚಿಸಲೇಬೇಕೆಂಬ ಹಂಬಲ ಕವಿ ಆನಂದರನ್ನು ಕಾಡಿದೆ. ಮನಸ್ಸಿನಲ್ಲಿ ಉಕ್ಕುವ ಭಾವನೆಗಳನ್ನು ಹತ್ತಿಕ್ಕಿ ಹಿಡಿಯಲಾರದೆ, ಉಕ್ಕಿ ಬಂದ ಸರಳ ಕವಿತೆಗಳಿವು. ಪ್ರಸ್ತುತ ಕವಿಗೆ ಕವಿತೆ ಬರೆಯಬೇಕೆಂಬ ಲವಲವಕೆಯಿದೆ. ಅರಳಲು ನಿಂತ ಮೊಗ್ಗುಗಳ ಹಾಗೆ ಸುಗಂಧ ಸೂಸಿ ನಾಲ್ಕು ಜನರಿಗೆ ಕಾಣುವ ಹುಮ್ಮಸದ ಸಂಕಲನವಿದು
ಆನಂದ ಫ. ದೊಡ್ಡ ಕುರುಬರ ಅವರು ಪ್ರಸ್ತುತ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಕೃತಿಗಳು: ಕಾಣಿಸದ ಕೈ, ಅರಳುವ ಮೊಗ್ಗುಗಳು. ...
READ MORE