ಆರಕ್ಷಕನ ಅಂತರಾಳ

Author : ಗುರುಶಾಂತ ಗೌಡ ಬಿ.

Pages 88

₹ 100.00




Year of Publication: 2020
Published by: ಶಿವ ಬಸವ ಪ್ರಕಾಶನ

Synopsys

'ಆರಕ್ಷಕನ ಅಂತರಾಳ' ಗುರುಶಾಂತಗೌಡ ಅವರ ಕವನ ಸಂಕಲನವಾಗಿದೆ. ಎಲ್ಲವೂ ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕಾದರೆ ಪೊಲೀಸ್‌ ಇಲಾಖೆಯ ಪಾತ್ರವು ತುಂಬಾ ಮಹತ್ವಪೂರ್ಣವಾದುದು. ಎಲ್ಲರ ಹಾಗೆಯೇ ಅರಕ್ಷಕರು ಸಹ ಕುಟುಂಬದ ಜೊತೆ, ಸ್ನೇಹಿತರ ಹೊಸ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದರೆ ಎಷ್ಟೋ ಸಾಮಾಜಕ ದುಷ್ಕೃತ್ಯಗಳು ನಡೆಯುತ್ತಿದ್ದವೇನೋ. ಪ್ರಾಣದ ಹಂಗನ್ನು ತೊರೆದು ಸೇವೆಯನ್ನು ನೀಡುತ್ತಿರುವ ಅರಕ್ಷಕರಿಗೆ ಸಮಾಜದಲ್ಲಿ ಉತ್ತಮ ಗೌರವ ಸಿಗಬೇಕಿದೆ. ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀನ್  ಹಗಲು - ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಹತ್ತು ಹಲವಾರು ವಿಷಯಗಳ ಕುರಿತು ಕವನ ರಚಿಸಿ, ಕರ್ತವ್ಯದ ಸಂದರ್ಭದಲ್ಲಿ ಕಂಡ ತಮ್ಮ ಹಾಸ್ಯ, ವಿಡಂಬನೆಗಳ ಸಂದರ್ಭ ಬೆರೆಸುತ್ತ, ತುಂಬಾ ಸರಳವಾಗಿ ಸರ್ವರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ.  ವೃತ್ತಿ ಬದುಕಿನ ಒತ್ತಡದ ನಡುವೆಯೂ ಸಾಹಿತ್ಯ ಲೋಕಕ್ಕೆ ತಮ್ಮದೇ ಕೊಡುಗೆಯನ್ನು ಸಲ್ಲಿಸಿದ್ದಾರೆ. ಅವರ ಇನ್ನೂ ಹೆಚ್ಚಿನ ಸಾಹಿತ್ಯ ಕೃತಿಗಳು ಎಲ್ಲದ ಮನ ಮುಟ್ಟಲಿ ಎಂದು ಹಾರೈಸೋಣ. ಎಂದು ರವಿ .ಡಿ ಚನ್ನಣ್ಣವರ್‌ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗುರುಶಾಂತ ಗೌಡ ಬಿ.

ಗುರುಶಾಂತ ಗೌಡ ಬಿ. ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕು ಚಿಕ್ಕೊಪ್ಪ (ಕೆ.ಎಂ.) ಗ್ರಾಮದವರು. ಅವರು ಪ್ರಸ್ತುತ ಪೊಲೀಸ್ ಹೆಡ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ “ಕನ್ನಡ ಸೇವಾ ರತ್ನ' ಪ್ರಶಸ್ತಿ ಹೆಚ್‌ಎಸ್‌ಆರ್ ಪ್ರಕಾಶನ ಮತ್ತು ಕವಿವೃಕ್ಷ ಬಳಗದ ಸಂಕ್ರಾಂತಿ ಸುಗ್ಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ 'ಉದಯೋನ್ಮುಖ ಸಾಹಿತ್ಯ ಪ್ರತಿಭೆ' ಪ್ರಶಸ್ತಿ ಇನ್ನೂ ಅನೇಕ ಸಾಹಿತ್ಯ ಪುರಸ್ಕಾರಗಳು ದೊರೆತಿವೆ.  ...

READ MORE

Related Books