ವರ್ತಮಾನದ ಮಾನವ ಸಂಬಂಧಗಳಿಗೆ ತಮ್ಮ ಕವಿತೆಗಳ ಮೂಲಕ ಕನ್ನಡಿ ಹಿಡಿದಿದ್ದಾರೆ ಕವಿ ಸದಾಶಿವ್. ಈ ರೂಪಕಗಳ ಕಟ್ಟುವಿಕೆಯಲ್ಲಿನ ತಾಜಾತನ ಹಿತವೆನಿಸುತ್ತದೆ. ಕವಿತೆಗಳು ಸೌಮ್ಯವಾಗಿ ಧ್ವನಿಸಿದರೂ ಒಡಲಾಳದ ದೃಢತೆ ನಮ್ಮೊಳಗೊಂದು ಗಟ್ಟಿತನದ ತರಂಗವನ್ನು ಹೀಗೆ ಹಾಯಿಸುತ್ತದೆ. “ಅಪ್ಪ ಅವ್ವ ನಳನಳಿಸುತ್ತಾರೆ ಯಾರ್ಯಾರೋ ತೊಡಿಸಿ ಹೋದ ಅವಮಾನದ ಬಟ್ಟೆಯಿಂದ ನೋಡಿ ಅದೆಷ್ಟು ಗಟ್ಟಿ ಇಂದಿಗೂ ಅದಕ್ಕೊಂದು ಸವಕಲು ಬಂದಿಲ್ಲ”
ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ. ಬರೆದ ಯಾವುದೊ ಒಂದು ಸಾಲು ಓದುವ ಯಾರದೊ ಎದೆಯೊಳಗೆ ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ. ಕಥೆ ಇವರ ಇಷ್ಟದ ...
READ MORE