‘ಅಂತರಂಗಯಾನ’ ಕೃತಿಯು ಜಿ.ಆರ್. ಪರಿಮಳಾರಾವ್ ಅವರ ಜಪಾನಿ ಮಾದರಿಯ ಹೈಕುಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ದೊಡ್ಡರಂಗೇಗೌಡ ಅವರು, ಇಲ್ಲಿ ಸೂಕ್ಷ್ಮಮತಿ ಕವಯಿತ್ರಿ ತನ್ನ ಸಂವೇದನಾಶೀಲ ಮನಸ್ಸಿನಿಂದ ಬದುಕನ್ನು ಮತ್ತೆ ಮತ್ತೆ ಅವಲೋಕಿಸಿ ಬರೆಯುತ್ತಾರೆ. ಹೀಗಾಗಿ, ಅವರ ವಿಮರ್ಶೆ ಕೂಡಾ ಕಾವ್ಯಾಸಕ್ತ ಓದುಗರಿಗೆ ಇಷ್ಟವಾಗುತ್ತದೆ. ಹುಟ್ಟು ಸಾವಿನ ಮಧ್ಯೆ ಮುಖವಾಡಗಳ ಮೆರವಣಿಗೆ ಎಲ್ಲಿದೆ ನಿಜ ಬರವಣಿಗೆ? ಹೀಗೆ ತಮ್ನನ್ನೇ ತಾವು ತನಿಖೆ ಮಾಡಿಕೊಳ್ಳಬಲ್ಲವರು ಕಲೆಗಾರ್ತಿ, ಲೇಖಕಿ ಜಿ. ಆರ್. ಪರಿಮಳಾರಾವ್. ಆಕೆಯ ಅಭಿವ್ಯಕ್ತಿಯಲ್ಲಿ ಕತ್ತಿಯ ಅಲುಗಿನ ಮೊನಚಿದೆ. ಸಾಗರದ ವೇದಿಕೆ ಮೇಲೆ ಅಲೆಗಳ ಭಾವ ನರ್ತನ, ಅಮರ ಅವರ ಪ್ರದರ್ಶನ! ಪ್ರಕೃತಿಯ ಚೆಲುವನ್ನೂ ಹೀರಿಕೊಂಡ ಬರಹಗಾರ್ತಿ ತಾನು ಪಡೆದ ಆನಂದವನ್ನು ಅಭಿವ್ಯಕ್ತಿಯಾಗಿ ಪರಿವರ್ತಿಸಿದಾಗ ಓದುಗರಿಗೂ ಅದು ಖುಷಿ ನೀಡುತ್ತದೆ ಎಂದು ಈ ಕವನದ ಮೂಲಕ ಕವಯಿತ್ರಿ ಹೇಳುತ್ತಾರೆ. ಇಲ್ಲಿ ಕವಯಿತ್ರಿ ತಮ್ಮ ಸುತ್ತಣ ಪರಿಸರವನ್ನು ಸಂತೋಷದಿಂದಲೇ ನೋಡುತ್ತಾರೆ- ‘ಆಗಸದ ನಿಲ್ದಾಣ, ಕಾಮನಬಿಲ್ಲಿನ ರೈಲು-ಓಡುತಿದೆ ಕನಸು ಮೈಲು ಮೈಲು ಎಂದು ಭಾವುಕವಾಗಿ ಬರೆಯುತ್ತಾರೆ. ಆಕೆಯ ಕಲ್ಪನೆಯೇ ಚೆನ್ನ. ಪರಿಮಳ ಅವರು ಚಿಂತನಶೀಲೆ, ಕಾವ್ಯ ಕಟ್ಟಬಲ್ಲ ಕಲೆ ಆಕೆಗೆ ಸಿಕ್ಕಿವೆ. ಅದು ಆಕೆಗೆ ತನ್ನ ಚಿಂತನದಿಂದ ದಕ್ಕಿದ್ದು; ಭಾವುಕ ಮನಸ್ಸಿನಿಂದ ಉಕ್ಕಿದ್ದು. ಕಲಾವಿದೆಯಾಗಿ ಬಾಳ ಕಹಿ ಸಿಹಿಗಳು ಏರಿಳಿತದಲ್ಲಿ ಬಿಕ್ಕಿದ್ದು, ವಿಷಾದ ಭಾವವನ್ನೂ ಆಕೆ ಚೆನ್ನಾಗಿಯೇ ಸೆರೆ ಹಿಡಿಯಬಲ್ಲರು ತಮ್ಮ ಕಲಾತ್ಮಕ ನುಡಿಗಳಲ್ಲಿ ' ಎಂದು ಪ್ರಶಂಸಿಸಿದ್ದಾರೆ.
ಹನಿಗವನಗಳ ರಚನೆಯಲ್ಲಿ ಆಸಕ್ತಿಯುಳ್ಳ ಪರಿಮಳಾರಾವ್ ಜಿ. ಆರ್. ತಮ್ಮ ದಿನನಿತ್ಯದ ಅನುಭವಗಳ ಮನಸ್ಸಿನ ಮಾತುಗಳನ್ನು ಹನಿಗವನಗಳಿಗೆ ಇಳಿಸುತ್ತಾರೆ. 1941 ಜನವರಿ 06 ರಂದು ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಜನಿಸಿದರು. ’ಮಂದಾರ ಮಾಲಿನಿ’ ಅವರ ಕವನ ಸಂಕಲನ. ’ಬರ್ಥ್ ಆಫ್ ಹೋಪ್, ಅಲೆಯ ಆಲಾಪ, ಅಂತರಂಗಯಾನ, ಸ್ವರ್ಣ ಸಂಪಿಗೆ’ ಹೈಕುಗಳ ಕೃತಿ. ’ಮಿನುಗು ದೀಪ ಹನಿಗವನಗಳು, ಋತುಗಾನ’ ಅವರ ಮತ್ತಿತರ ಕೃತಿಗಳು. ‘ಸ್ಪಿಂಗ್ ಅವಾರ್ಡ್, ಸರ್ ಎಮ್. ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಗಾರ್ಡನ್ ಆಫ್ ಪೊಯಟ್’ ಮುಂತಾದ ಗೌರವ ಪುರಸ್ಕಾರಗಳು ಸಂದಿವೆ. ...
READ MORE