ಅಂತರಂಗದ ಮೃದುಂಗ

Author : ಶರಣಗೌಡ ಪಾಟೀಲ, ಜೈನಾಪುರ

Pages 96

₹ 90.00




Year of Publication: 2021
Published by: ನಿರಂಜನ ಪ್ರಕಾಶನ
Address: ಜೇವರ್ಗಿ, ಕಲಬುಗಿರಿ ಜಿಲ್ಲೆ

Synopsys

ಕವಿ-ಲೇಖಕ ಶರಣಗೌಡ ಪಾಟೀಲ ಜೈನಾಪುರ ಅವರ ಕವನ ಸಂಕಲನ-ಅಂತರಂಗದ ಮೃದಂಗ. ಸಾಹಿತಿ ಸಿದ್ಧರಾಮ ಹೊನ್ಕಲ್ ಕೃತಿಗೆ ಬೆನ್ನುಡಿ ಬರೆದು ‘ಹಾಸ್ಯಪ್ರಜ್ಞೆ , ಸಾಮಾಜಿಕ ಸಮಸ್ಯೆಗಳಿಗೆ; ಸುತ್ತಲಿನ ವೈರುಧ್ಯಗಳಿಗೆ ಅತ್ಯಂತ ವಿಡಂಬನಾತ್ಮಕವಾಗಿ ಕವಿಯು ಸ್ಪಂದಿಸಿದ್ದಾರೆ. ಧಾರ್ಮಿಕ ಮನೋಭಾವದ ಪರಿಸರದಲ್ಲಿ ಬೆಳೆದರು ಸಹ ಯಾವುದನ್ನೇ ಆದರೂ ವೈಚಾರಿಕವಾಗಿ ಆಲೋಚಿಸಿ; ಚಿಂತಿಸಿ ತಮ್ಮದೇ ಒಂದು ಸ್ವತಂತ್ರ ದೃಷ್ಟಿಕೋನದಿಂದ ಇಲ್ಲಿ ಬರಹಕ್ಕಿಳಿಸಲು ಯತ್ನಿಸಿದ್ದು ಗಮನಿಸಬಹುದು. *ಕಣ್ಣಿಗೆ ಕಾಣುವದೆಲ್ಲ ಸತ್ಯವಲ್ಲ, ಸತ್ಯವಾದುದು ಕೆಲವೊಮ್ಮೆ, ಕಣ್ಣಿಗೆ ಕಾಣುವುದೇ ಇಲ್ಲ!, ಅವರವರ ಅಂತರಂಗದ ಕಣ್ಣು ತೆರೆದಾಗ ಕಾಣುವುದೇ ನಿಜವಾದ ಸತ್ಯ! ಉಳಿದುದೆಲ್ಲ- ಮಿಥ್ಯ* ಇವರ ಈ ಹನಿಗವಿತೆಯ ಮೂಲಕ ಇಂತಹ ಬರೀ ಗಣ್ಣಿಗೆ ಕಾಣದ ಅನೇಕ ಕಟು ಸತ್ಯಗಳನ್ನು ಕವಿ ಶ್ರೀ ಶರಣಗೌಡ ಪಾಟೀಲರು ಈ ಸಂಕಲನದಲ್ಲಿ ತಮ್ಮ ಕಾವ್ಯ,ಹನಿಗವನ, ಚುಟುಕು,ಹೀಗೆ ತಮ್ಮ ಅನುಭವದ ನುಡಿಗಳ ಮೂಲಕ ಬಹು ಸುಂದರವಾಗಿ, ಹಾಸ್ಯಮಯವಾಗಿ ವರ್ತಮಾನದ ತಲ್ಲಣಗಳನ್ನು ಕಟ್ಟಿಕೊಡುವ ಮೂಲಕ ತಮ್ಮ ಕಾವ್ಯದ ಸೃಜನಶೀಲ ಸಂವೇದನೆ ತೋರಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಶರಣಗೌಡ ಪಾಟೀಲ, ಜೈನಾಪುರ
(01 June 1969)

ಲೇಖಕ ಶರಣಗೌಡ ಪಾಟೀಲರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೈನಾಪುರ ಗ್ರಾಮದವರು. ತಂದೆ ಈಶ್ವರಪ್ಪಗೌಡ, ತಾಯಿ ಕಮಲಮ್ಮ, ಎಂ.ಎ ಹಾಗೂ ಎಂ.ಕಾಂ. ಪದವೀಧರರು. ಜೇವರ್ಗಿಯಲ್ಲಿ ನಿರಂಜನ ಪ್ರಕಾಶನ (2007) ಸ್ಥಾಪಿಸಿದರು. ರಂಗಂಪೇಟೆಯ ಬರಹಗಾರರ ಬಳಗದ ಕಾರ್ಯದರ್ಶಿ, ಸುರಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವಲಯ ಅಧ್ಯಕ್ಷರು, ರಂಗಪೇಟೆಯ ಕನ್ನಡ ಸಾಹಿತ್ಯ ಸಂಘದ ಸದಸ್ಯರು, ಮಕ್ಕಳ ಸಾಹಿತ್ಯ ಪರಿಷತ್ತು(ಜೇವರ್ಗಿ) ಉಪಾಧ್ಯಕ್ಷರು, ಗುಲಬರ್ಗಾ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರಗೊಂಡಿವೆ. ಜೇವರ್ಗಿ ತಾಲೂಕು 5ನೇ ಶರಣ ಸಾಹಿತ್ಯ (2021) ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸದ್ಯ, ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪದವಿಪೂರ್ವ ...

READ MORE

Related Books