‘ಅಂತರಂಗದ ಅಲೆಗಳು’ ಕೃತಿಯು ಸುಲಕ್ಷಣಾ ಎ. ಅಂಗಡಿ ಅವರ ಕವನಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ವಿಶ್ವನಾಥ ಆರ್. ಕುಲಕರ್ಣಿ ಅವರು, `ಹಿತಮಿತ ಭಾಷಾ ಬಳಕೆ, ಸುಲಲಿತ ಬರವಣಿಗೆ ಎಲ್ಲಕ್ಕಿಂತ ಹೆಚ್ಚಾಗಿ ಆಪ್ತ ಧಾಟಿಯಲ್ಲಿ ಅರಳಿಸುವ ಸುಲಕ್ಷಣಾ ಅವರ ಕವಿತೆಗಳು ಭರವಸೆಯ ದಾರಿ ತುಳಿದಿವೆ. ಅವರು ಗೃಹಿಣಿ, ಉದ್ಯೋಗಸ್ಥೆ, ವಿದ್ಯಾವಂತೆ ಎಲ್ಲ ಆದರೂ ಅವರಲ್ಲಿ ಕವಿಮನಸ್ಸಿದೆ. ಬಿಡುವಿಲ್ಲದ ಕೆಲಸದ ನಡೆವೆಯು ಕಾವ್ಯ ಪ್ರೀತಿಯನ್ನು ಉಳಿಸಿಕೊಂಡಿರುವರು. ಕವಿಯಿತ್ರಿ ಇನ್ನೂ ಸಾಹಿತ್ಯ ಕೃಷಿಯನ್ನು ಹೆಚ್ಚು ಮಾಡಬೇಕಾಗಿದೆ. ಸುತ್ತಲ ಪರಿಸರ ಮನಸ್ಸಿನ ಮೇಲೆ ಮೂಡಿಸುವ ಪ್ರತಿಮೆಗಳು ಅವರ ಕವಿತೆಗಳಲ್ಲಿ ಶಬ್ಧ ರೂಪಗಳಲ್ಲಿ ಇನ್ನೂ ಪಕ್ಷವಾಗಿ ಅಚ್ಚೊತ್ತಬೇಕಾದರೆ ಕನ್ನಡ ಕಾವ್ಯ ಪರಂಪರೆಯು ಅಧ್ಯಯನ ಅಗತ್ಯ. ಓದು ಬರಹ ಜತೆ ಜತೆಯೇ ಸಾಗಿದಾಗ ಮಾತ್ರ ಯಶಸ್ಸಿನ ಮೆಟ್ಟಿಲು ಕಂಡಿತು’ ಎಂದಿದ್ದಾರೆ.
ಸುಲಕ್ಷಣಾ ಶಿವಪೂರ ಅವರು ಮೂಲತಃ ಹುಬ್ಬಳ್ಳಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವಿತೆ, ಕತೆ ಹಾಗೂ ಪ್ರವಾಸ ಕಥನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ. ಸ್ಥಳೀಯ ಸಾಹಿತ್ಯ ಸಮ್ಮೇಳನ ಹಾಗೂ ಇತರೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಕವನವಾಚನ ಮಾಡಿದ್ದಾರೆ. ಧಾರವಾಡದ ‘ಕರ್ನಾಟಕ ಬಾಲ ವಿಕಾಸ ಅಕಾಡೆಮಿ' ವತಿಯಿಂದ ‘ಶಾಲಾ ಮಕ್ಕಳ ಆರೊಗ್ಯ ಹಾಗೂ ಆಹಾರ’ ವಿಷಯದ ಕುರಿತು ಸಂಶೋಧನೆ ಮಾಡಿರುತ್ತಾರೆ. ಸ್ಟಾರ್ ಸುವರ್ಣ ನಡೆಸಿದ ಕನ್ನಡದ ಕೋಟ್ಯಾಧಿಪತಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿರುವ ಅವರು ಹಿಂದಿ ಸಾಹಿತ್ಯದಲ್ಲಿ ಸುಮಾರು 500ಕ್ಕೂ ಹೆಚ್ಚು ಶಾಯರಿಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅವರಿಗೆ ವಿವಿಧ ಸಂಸ್ಥೆ, ಸಂಘಟನೆಗಳ ವತಿಯಿಂದ ಸನ್ಮಾನಗಳನ್ನು ಪಡೆದಿರುತ್ತಾರೆ. ಕೃತಿಗಳು ...
READ MORE