ಅಂತರಾಳ ಶೋಭಾ ಹರಿಪ್ರಸಾದ್ ಅವರ ಕಾವ್ಯಗಳ ಕುಸುರಿಯಾಗಿದೆ. ಶೋಭಾರವರ ಲೇಖನಿಯಿಂದ ಹೊರಹೊಮ್ಮಿದ ಅಂತರಾಳ' ಸುಂದರ ಕಾವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ, ಈ ಐವರು ಕಾವ್ಯ ಕನ್ನಿಕೆಯರ ಅಂತರಂಗದ ತುಮುಲ ಈ ಕಾವ್ಯ ಮಾಲೆಯಲ್ಲಿ ಅತ್ಯಂತ ನೈಜವಾಗಿ ಮೂಡಿಬಂದಿದೆ. ಎಲೆಮರೆಯ ಕಾಯಿಯಂತೆ ದೂರದ ಸೌದಿ ಅರೇಬಿಯಾದಲ್ಲಿ ಕುಳಿತು ಅವರು ಮಾಡಿದ ಕನ್ನಡದ ಸೇವೆ ಗಮನಾರ್ಹ. ಸ್ವಲ್ಪ ತಡವಾಗಿಯೇ ಸಾಹಿತ್ಯ ಕೃಷಿಗೆ ಇಳಿದ ಉತ್ತಮೋತ್ತಮ ಕೃತಿಗಳ ರಚನೆಯಾಗಿ, ಇವರಿಂದ ಇನ್ನಷ್ಟು ಸಹೃದಯ ಕನ್ನಡಿಗರ ಕೈಸೇರಿ ಪ್ರೀತಿಯ ಪ್ರೋತ್ಸಾಹ ನಿರಂತರ ಲಭಿಸಲಿ ಎನ್ನುವುದೇ ನನ್ನ ಆಶಯ ಎಂದು ಗೀತಾ ದೇವಿ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಶೋಭಾ ಹರಿಪ್ರಸಾದ್ ಮೂಲತಃ ಸಾಲಿಕೇರಿಯವರು. ತಾಯಿ ಲಲಿತಾ ಶೆಟ್ಟಿಗಾರ್ ತಂದೆ ನಾರಾಯಣ ಶೆಟ್ಟಿಗಾರ್. ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಪೂರ್ಣಗೊಳಿಸಿ ಹೈಸ್ಕೂಲ್ ಮತ್ತು ಬಿ. ಎ ಪದವಿಯನ್ನು ಎಸ್ ಎಮ್ ಎಸ್ ಬ್ರಹ್ಮಾವರ ಕಾಲೇಜಿನಲ್ಲಿ ಪೂರ್ಣ ಗೊಳಿಸಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಬಿ.ಎಡ್. ಅನ್ನು ಪೂರ್ಣಗೊಳಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ವರ್ಷದಿಂದ ತೊಡಗಿಸಿ ಕೊಂಡಿದ್ದಾರೆ. ಇವರು ಮೊದಲು ಬರೆದದ್ದು ಬೆರಳೆಣಿಕೆಯಷ್ಟು ಹನಿಗವನ ಮತ್ತು ಕತೆ. ರಾಜ್ಯ ಕವಿ ವೃಕ್ಷ ಪ್ರಶಸ್ತಿ, ವ್ಯಾಕರಣ ಚೂಡಾಮಣಿ ಪ್ರಶಸ್ತಿ ಅವರಿಗೆ ದೊರೆತ ಪ್ರಶಸ್ತಿಗಳಾಗಿವೆ. ಕೃತಿಗಳು : ಚಿಣ್ಣರ ಕನಸಿನ ಬಣ್ಣದ ಲೋಕ ,ಬೇವು ...
READ MORE