ಆಧುನಿಕ ವಿದ್ಯಮಾನಗಳ ಒಳಸುಳಿಗಳಲ್ಲಿ ಸಿಕ್ಕ ರೈತರ ಸಂಕಷ್ಟಗಳನ್ನು ಕಂಡು ಕೊರಗಿದ ಕವಿ ರೈತರ ಬಾಳಿನ ಎಲ್ಲಾ ಮಗ್ಗುಲುಗಳನ್ನು ತಮ್ಮ ಸಂವೇದನೆಗೆ ತಂದುಕೊಂಡು ರಚಿಸಿದ ಕವಿತೆಗಳು ಇಲ್ಲಿವೆ. ಇಲ್ಲಿನ ರಚನೆಗಳಲ್ಲಿ ಕೇವಲ ಕರ್ನಾಟಕದ ರೈತನ ಒಳಸಂಕಟಗಳು ಮಾತ್ರವಲ್ಲ, ತೃತೀಯ ಜಗತ್ತಿನ ಎಲ್ಲಾ ನೆಲೆಗಳ ರೈತರ ಭಂಗ-ಭವಣೆಗಳು ಮಾತಾಡಿವೆ. ಮಹದಾಯಿ ನೀರಿನ ಸಮಸ್ಯೆಯ ಬಗೆಗೂ ಇಲ್ಲಿನ ಚೌಪದನಗಳು ರಾಷ್ಟ್ರೀಯ ಜಲನೀತಿಯನ್ನು ಒತ್ತಾಯಿಸುವ, ಒಕ್ಕೂಟ ವ್ಯವಸ್ಥೆಯ ಹೊಣೆಗಾರಿಕೆಯನ್ನು ನೆನಪಿಸುವ, ನೈತಿಕ ಮೌಲ್ಯದ ಅಧಿಕಾರಿಯುತ ರಚನೆಗಳಾಗಿವೆ.
ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು. ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...
READ MORE