‘ಅಂಜುಬುರುಕಿಯ ರಂಗವಲ್ಲಿ’ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಕವನ ಸಂಕಲನ. ಆರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತಿ ಜಯಂತ ಕಾಯ್ಕಿಣಿ ಮುನ್ನುಡಿ ಬರೆದು ‘. ವೃತ್ತಿಯಿಂದಲೂ ಪ್ರವೃತ್ತಿಯಿಂದಲೂ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುತ್ತಿರುವುದನ್ನು ಧ್ವನಿಸುವ ಸೊಲ್ಲುಗಳು ಇಲ್ಲಿವೆ. ಹುಸಿ ರಮ್ಯಾಲಾಪದ ಏಕತಾನದ ನಡುವೆ, ಸಮಾಜದಲ್ಲಿ, ಜೀವ ಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ ಕವಿತೆಗಳ ತುಡಿತ ಮಹತ್ವದ್ದಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಮಂಜುನಾಥ ನಾಯ್ಕ ಯಲ್ವಡಿಕವೂರ ಅವರು ಉತ್ತರ ಕನ್ನಡದ ಭಟ್ಕಳ ಮೂಲದವರು. ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿರುವ ಇವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ‘ಅಂಜುಬುರುಕಿಯ ರಂಗವಲ್ಲಿ’ ಇವರ ಚೊಚ್ಚಲ ಕವನ ಸಂಕಲನ. ...
READ MORE