ಅಣಕವಾಡಿನ ಅಂಗಳದಲ್ಲಿ ಕವನಸಂಕಲನವನ್ನು ಲೇಖಕ ಎನ್. ರಾಮನಾಥ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಏನಿದು ಅಣಕವಾಡು? ಮೂಲ ಹಾಡೊಂದರ ನುಡಿಗಟ್ಟು, ರಾಗ ಹಾಗೂ ಮಟ್ಟನ್ನು ಹಾಳುಗೆಡವದೆ, ಆ ಹಾಡಿನ ಧ್ವನಿಗೆ ಧಕ್ಕೆಯುಂಟುಮಾಡದೆ, ಅಲ್ಲಲ್ಲಿ ಪದಗಳನ್ನು ಬದಲಿಸುತ್ತ ಇಡಿಯ ಹಾಡನ್ನು ರೂಪಾಂತರಗೊಳಿಸಿದಾಗ, ಅಲ್ಲಿ ನಮಗೆ ತೋರ್ಪಡುವ ಹೊಸತೊಂದು ಹಾಡು ಹಾಗೂ ಹೊಸತೊಂದು ಭಾವವೇ ಅಣಕವಾಡು. ಅಣಕ ಅಂದರೆ ಅತಿಶಯ, ಅಪಹಾಸ್ಯ, ಹುಡುಗಾಟಿಕೆ, ಮೂದಲಿಕೆ, ವಿನೋದ ಇತ್ಯಾದಿ ಅರ್ಥಗಳೆಲ್ಲ ಇರುವುದರಿಂದ ಇವೆಲ್ಲವನ್ನೂ ಒಂದಲ್ಲ ಒಂದು ರೀತಿಯಲ್ಲಿ ಅಣಕವಾಡಿನಲ್ಲಿ ಕವಿ ಬಳಸಿಕೊಳ್ಳುತ್ತಾರೆ ಎಂದು ಈ ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
ಲೇಖಕ ಎನ್. ರಾಮನಾಥ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಪತ್ರಕರ್ತರು. ವಿಜಯಕರ್ನಾಟಕದಲ್ಲಿ ಅಕಂಣಕಾರರಾಗಿ ‘ವೀಕೆಂಡ್ ವಿನೋದ’, ಹಾಗೂ ಹೀಗೂ ಉಂಟು, ಸಂಗ್ಯಾ ಮಂಗ್ಯಾ ದೈನಿಕ ಅಂಕಣಗಳನ್ನು ಬರೆಯುತ್ತಿದ್ದಾರೆ. ಅವರ ‘ನಿದ್ರಾಂಗನೆಯ ಸೆಳವಿನಲ್ಲಿ’ ಕೃತಿಗೆ ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಕೃತಿಗಳು:ನಿದ್ರಾಂಗನೆಯ ಸೆಳವಿನಲ್ಲಿ, ಹಸಿರು ಬಾಗಿಲು (ಅನುವಾದ ಕೃತಿ) ...
READ MORE