ಅಲ್ಲಮನು ಮೈಮೇಲೆ ಬಂದಾಗ

Author : ಎಲ್. ಬಸವರಾಜು

Pages 109

₹ 90.00




Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ. 277. 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-58

Synopsys

’ಅಲ್ಲಮನು ಮೈಮೇಲೆ ಬಂದಾಗ’ ಕೃತಿ 12ನೇ ಶತಮಾನದ  ಅನುಭಾವಿ ಅಲ್ಲಮಪ್ರಭುವಿನ ವಚನಗಳನ್ನು ವ್ಯಾಖ್ಯಾನ ಮಾಡಿರುವ ಕೃತಿ. ಅಲ್ಲಮರ ವಚನಗಳನ್ನು ಅರಿಯಬೇಕೆಂದಿರುವವರಿಗೆ ಈ ಕೃತಿಯು ಪ್ರಮುಖ ಆಕರ ಗ್ರಂಥ. 80 ಬೆಡಗಿನ ವಚನಗಳ ಬಿಡಿಸಿ ಕವನ ರೂಪದಲ್ಲಿಯೇ ಪ್ರಸ್ತುತ ಪಡಿಸಲಾಗಿದೆ.

ನೀರ ನಡುವೆ ಒಂದು ಗಿಡ ಹುಟ್ಟಿತ್ತು
ಆ ಗಿಡದ ಎಲೆಮೇಲೆ ಬಂದಿತ್ತೊಂದು ಕೋಡಗ
ಆ ಕೋಡಗದ ಕೊಂಬಿನಲ್ಲಿ ಮೂಡಿತ್ತದ್ಭುತ
ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರ.!
ಈ ಬೆಡಗಿನ ವಚನಕ್ಕೆ ಬಸವರಾಜು ಅವರ ವ್ಯಾಖ್ಯಾನ ಇಂತಿದೆ-

ನಿಂತ ನೀರಲ್ಲಿ ಮಾನವ ಮರ ಹುಟ್ಟಿದೆ. ಕೋತಿಮನ ಹಾರಿಬಂದು ಮರವೇರಿದೆ. ಮರದಲ್ಲಿ ಚಿಗುರಿದ್ದೆಲ್ಲ ತರಿದಿ ಮುಕ್ಕುತ್ತಿದೆ. ಅಹಂ ನಾನೆಂಬ ಕೋಡು ಏರಿಸಿಕೊಂಡು ಮದವೇರಿ ಕುಣಿಯುತ್ತಿದೆ. ಲೋಕಕ್ಕೆ ಕೆಡುಕಾಗುತ್ತಿದೆ. ಕೊಂಬೆ ಕಡಿಯದೆ ಮಾನವ ಶರಣನಾಗಲಾರ...

ನಾಲ್ಕು ಸಾಲಿನ ಒಂದು ವಚನ ಜೀವನದ ಬಹು ಮಜಲನ್ನೆ ಮುಂದಿಡುತ್ತಿದೆ. ಮಾನವ ಏರುಗತಿಗೆ ಸಾಗಲು ಬಂದಿರುವನೆ ಹೊರತು ಇಳುಗತಿಗೆ ಬೀಳಲು ಅಲ್ಲ ಎಂಬೂದು ಅದೆಷ್ಟು ಎಚ್ಚರಿದ್ದರು ದೇಹದ ದರ್ದು ಬಿಡಬೇಕಲ್ಲ.! ಮನದ ಮಾರಿಗಳಾದ ಅರಿಷಡ್ವರ್ಗಗಳ ತರಿದು ತರುಲತೆಯಂತೆ ಮನ ಬೆಳೆಸಿ ಗುಹೇಶ್ವರಗೆ ನಿಜಶರಣರಾಗುವುದೆ ಶ್ರೇಷ್ಟ. ಅಲ್ಲಮರ ಇಂತಹ 80 ಬೆಡಗುಗಳು ಈ ಕೃತಿಯಲ್ಲಿದೆ.

About the Author

ಎಲ್. ಬಸವರಾಜು
(07 October 1919 - 29 January 2012)

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...

READ MORE

Related Books