‘ಅಕ್ಕಡಿ ಕಾಳು’ ತೋಟದ ಮನೆ ಚೆನ್ನಬಸವಯ್ಯ ಅವರ ಚೌಪದಿಗಳಾಗಿವೆ. ಚೌಪದಿಗಳು ಅಥವಾ ಮುಕ್ತಕಗಳೆಂದು ಕರೆಸಿಕೊಳ್ಳುವ ಇಲ್ಲಿನ ನಾಲ್ಕು ಸಾಲಿನ ಪದ್ಯಗಳಲ್ಲಿ ಬಹಳಷ್ಟು ಕಿವಿಮಾತು-ಹಿತನುಡಿಗಳ ಅಡಕವಾಗಿದೆ.
ತೋಟದ ಮನೆ ಚೆನ್ನಬಸವಯ್ಯ ಮೂಲತಃ ಹುಳಿಯಾರು ಹೋಬಳಿಯ ಬಸವನಗುಡಿ ತೋಟದ ಮನೆಯವರು. ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕಾರ್ಯನಿರ್ವಹಿಸಿದ್ದಾರೆ. ...
READ MOREಹೊಸತು ಜೂನ್-2002
ಚೌಪದಿಗಳು ಅಥವಾ ಮುಕ್ತಕಗಳೆಂದು ಕರೆಸಿಕೊಳ್ಳುವ ಇಲ್ಲಿನ ನಾಲ್ಕು ಸಾಲಿನ ಪದ್ಯಗಳಲ್ಲಿ ಬಹಳಷ್ಟು ಕಿವಿಮಾತು-ಹಿತನುಡಿಗಳು ಅಡಕವಾಗಿವೆ. ಸರಳ ಆಡುಭಾಷೆಯಷ್ಟೇ ಪ್ರಭಾವಶಾಲಿಯಾದ ಹೇಳಿಕೆಗಳು ಹಾಸ್ಯ - ವ್ಯ೦ಗ್ಯಗಳಿಂದ ಮೊನಚಾಗಿದ್ದು ಬುದ್ಧಿವಾದದ ಎಳೆಯೊಂದು ಎಲ್ಲ ಕಡೆ ಹಾಸುಹೊಕ್ಕಾಗಿ ಬಂದಿದೆ. ಜೀವನ ಶ್ರದ್ಧೆ - ಪ್ರೀತಿ ಮೈಗೂಡಿಸಿಕೊಂಡ, ವೃತ್ತಿಯಲ್ಲಿ ಅಧ್ಯಾಪಕರಾದ ಲೇಖಕರು ಮೌಲಿಕ ಮಾತುಗಳನ್ನು ಮುಕ್ತಕಗಳ ಮೂಲಕ ನಮ್ಮೆಲ್ಲರಿಗೂ ಹೇಳಿದ್ದಾರೆ.