ಲೇಖಕ ಜಂಬಣ್ಣ ಅಮರಚಿಂತ ಅವರ ʼಅಕ್ಕನ ಹೃದಯ ಗೀತಾಂಜಲಿʼ ಕೃತಿಯು ಗೀತಕಾವ್ಯವಾಗಿದೆ. 41 ರಚನೆಗಳು ಇಲ್ಲಿವೆ. ಕೃತಿಗೆ ಮುನ್ನುಡಿ ಬರೆದ ಡಾ. ಬಸವಲಿಂಗ ಸೊಪ್ಪಿಮಠ ಅವರು, ಒಂದೊಂದು ಗೀತ ಪ್ರತ್ಯೇಕ ಎಂದು ಭಾವಿಸಬೇಕಿಲ್ಲ. ಅಕ್ಕನ ದಿಗಂಬರ ನಿಲುವಿನ ಹಿಂದಿನ ವೈರಾಗ್ಯ ಆಕೆ ಹೇರಿಕೊಂಡಿದ್ದಲ್ಲ. ಅದನ್ನು ವೈರಾಗ್ಯ ಎನ್ನುವುದಕ್ಕಿಂತ ಪುರುಷಲೋಕದ ಒತ್ತಡಕ್ಕೆ ಹುಟ್ಟಿಕೊಂಡ ಜಿಗುಪ್ಸಾತ್ಮಕ ಪ್ರತಿಭಟನೆ ಎಂದರೂ ನಡೆದೀತು. ಇಲ್ಲಿ ಅಕ್ಕನ ಭಾವನೆ ವೈವಿಧ್ಯತೆ ಮತ್ತು ಆಳ ಸಮಗ್ರವಾಗಿ ಬಂದಿದೆ ಎಂದು ಹೇಳಲಾಗದಾದರೂ ಒಲಿದವನ ಹುಡುಕಾಟಕ್ಕೆ ಇಲ್ಲಿ ಪ್ರಾಶಸ್ತ್ಯ ದೊರಕಿದೆ. ಈ ಹುಡುಕಾಟದಲ್ಲಿ ತೀವ್ರತೆ ಇದೆ, ಮಿಲನದ ಹಂಬಲ ಇದೆ, ಒಡಲು ಒಡಲಿಲ್ಲದವನ ಪ್ರೀತಿಸುವುದು ಹೇಗೆ ಎಂಬ ತರ್ಕಬದ್ಧ ತೊಡಕು ಇದೆ ಎನ್ನುವುದನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಜಗತ್ತು ಕಂಡ ಅಪೂರ್ವ ಸಾಧಕಿ, ಅನನ್ಯ ಅನುಭಾವಿ, ಬುದ್ಧಿ ತಿಳಿಯುವ ಮೊದಲೇ ಶಿವನ ಪತ್ನಿ ಎಂದ ಭಾವಿಸಿದ ಅಕ್ಕಯ್ಯನ ಜೀವನದ ಕುರಿತು ವಿಶ್ಲೇಷಿಸುತ್ತದೆ. ಭಾವನೆಗೆ ವಿರುದ್ಧವಾಗಿ ಅರಸೊತ್ತಿಗೆ ಬಂದು ನಿಂತಾಗ ದೃಢತೆಯಿಂದ ಅದನ್ನು ದಾಟಿ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡವಳ ಕತೆ ಇಲ್ಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ..
ಜಂಬಣ್ಣ ಅಮರಚಿಂತ ಅವರು 1945 ಏಪ್ರಿಲ್ 7ರಂದು ರಾಯಚೂರಿನಲ್ಲಿ ಜನಿಸಿದರು. ಆರೋಗ್ಯ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಬಣ್ಣ ಅವರು ಬರೆದ ಪ್ರಮುಖ ಕೃತಿಗಳೆಂದರೆ ಮುಂಜಾವಿನ ಕೊರಳು, ಅಧೋ ಜಗತ್ತಿನ ಆಕಾವ್ಯ; (ಕವನ ಸಂಗ್ರಹಗಳು), ಝರಿ-ಬೆಟ್ಟ (ಕಾದಂಬರಿ),ಅಮರಚಿಂತ ಕಾವ್ಯ (ಸಮಗ್ರ ಕಾವ್ಯ). ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ...
READ MORE