ಜಿ.ಎಚ್. ಜ್ಯೋತಿಲಿಂಗಪ್ಪ ಶಿವನಕೆರೆ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಅಕ್ಕಮಹಾದೇವಿಯ ವಚನಗಳನ್ನು ಕೈಗೆತ್ತಿಕೊಂಡು ತಮ್ಮ ವ್ಯಕ್ತಿತ್ವದಲ್ಲಾದ ಬದಲಾವಣೆಯನ್ನು ’ಅಕ್ಕ ಕವಿತೆಗಳು’ ಕೃತಿಯಲ್ಲಿ ಹೊರಹಾಕಿದ್ದಾರೆ.
ವೈಯಕ್ತಿಕ ನೆಲೆಯಲ್ಲಿ ಕವಿ ತನ್ನನ್ನು ತಾನು ಹುಡುಕಿಕೊಳ್ಳುವ ಪ್ರಯತ್ನ , ಅಕ್ಕ ಎದುರಿಸಿದ ಅಂದಿನ ಸಾಮಾಜಿಕ, ಸಾಂಸಾರಿಕ, ಭಾವನಾತ್ಮಕ ಸವಾಲು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದ್ದು ಅದಕ್ಕೆ ಅಗತ್ಯವಾದ ಧೈರ್ಯ, ಸ್ಥೈರ್ಯಗಳನ್ನು ಪಡೆಯುವುದಕ್ಕೆ ತಮ್ಮದೇ ಅನುಭಾವಿಕ ಚಿಂತನೆಯಲ್ಲಿ ಕವಿ ಪ್ರಯತ್ನ ನಡೆಸಿದ್ದಾರೆ.
ಮೂಲತಃ ಚಿತ್ರದುರ್ಗದ ಬೇಡರ ಶಿವನಕೆರೆಯವರಾದ ಜ್ಯೋತಿಲಿಂಗಪ್ಪ ಅವರು 15-11-1950ರಂದು ಜನಿಸಿದರು. ತಂದೆ- ಹನುಮಂತಪ್ಪ ಎಸ್.ಜಿ., ತಾಯಿ- ಕಲ್ಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಫ್ರೌಢಶಿಕ್ಷಣವನ್ನು ಸಿರಿಗೆರೆಯಲ್ಲಿ, ಬಿ.ಎಸ್ಸಿ ಪದವಿಯನ್ನು ಬೆಂಗೂರಿನಲ್ಲಿ ಪೂರೈಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಎಂ.ಎಡ್, ಜೊತೆಗೆ ಮೈಸೂರಿನಲ್ಲಿ ಡಿಪ್ಲೊಮಾ ಇನ್ ತಮಿಳು ಪದವಿಗಳನ್ನು ಪಡೆದಿದ್ದಾರೆ. ಆನಂತರ ಭದ್ರಾವತಿಯ ಅಗರದಳ್ಳಿಯಲ್ಲಿ ಫ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1997ರಿಂದ 2010ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಫೋಟೋಗ್ರಾಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ...
READ MORE