ಕಾಶೀನಾಥ ಅಂಬಲಗಿ ಅವರ ಆಯ್ದ 71 ಅನುವಾದಿತ ಕವಿತೆಗಳ ಸಂಕಲನ. ಕೋಗಿಲೆ ಅಳುತಿದೆ, ಸಮಕಾಲೀನ ಪಂಜಾಬಿ ಕವಿತೆಗಳು, ರಘುವೀರ ಸಹಾಯ ಕವಿತೆಗಳು, ಅಂಬೇಡ್ಕರ್ ಕವಿತೆಗಳು ಹೀಗೆ ಆಯ್ದು ಎತ್ತಿಕೊಂಡ 71 ಕವಿತೆಗಳು ತಮ್ಮ ಓದಿಗೆ, ಪರಾಮರ್ಶೆ, ಕಾವ್ಯಾನಂದಕ್ಕೆ ಹಾಗೂ ಅನಿಕೇತನ ಕಾವ್ಯಾನುಭವ, ಕನ್ನಡ ಕಾವ್ಯಾನುಭವಕ್ಕೆ ಹೆಚ್ಚಿನದನ್ನು ಕೊಡಲಿ ಎಂಬ ಆಶಯಗಳೊಂದಿಗೆ ಈ ಕೃತಿ ರಚಿಸಿದ್ದಾರೆ.
ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ. ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...
READ MORE