‘ಆಡೂವ ಗಿಣಿಯೊಂದ ಕಳಿಸಮ್ಮ’ ಕೆ. ವೈ. ನಾರಾಯಣಸ್ವಾಮಿ ಅವರ ಕವನಸಂಕಲನವಾಗಿದೆ. ಇಪ್ಪತ್ತೇಳು ಕವಿತೆಗಳ ಸಂಕಲನ. ದೀರ್ಘಕಾಲದ ಜೀವನಾನುಭವದ ಹಿನ್ನೆಲೆಯಲ್ಲಿ ಬರೆದಿರುವ ಈ ಕವಿತೆಗಳಲ್ಲಿ ಮನುಷ್ಯ ಮಹತ್ವವಾದದ್ದನ್ನೇನೋ ಕಳೆದುಕೊಂಡು ಮತ್ತೆ ಹುಡುಕಾಟ ನಡೆಸುತ್ತಿರುವಂತಿದೆ. ಇದು ಇಂದಿನ ಬಾಳಿನ ಚಿತ್ರಣವೂ ಹೌದು. ಸಂತೆಯಲ್ಲಿ ತನ್ನ ಸರಕನ್ನು ಮಾರಿ ಕೈ ತೊಳೆದುಕೊಂಡಷ್ಟು ಸಹಜವಾಗಿ ಮನುಷ್ಯ ತನ್ನತನವನ್ನೆಲ್ಲಾ ಬಿಕರಿಯಾಗಿಟ್ಟು ಬದುಕುತ್ತಾನೆ.
ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಮತ್ತು ಅಕಾಡೆಮಿಕ್ ವಲಯಗಳಲ್ಲಿ ಕೆ.ವೈ.ಎನ್ ಎಂದೇ ಚಿರಪರಿಚಿತರಾಗಿರುವ ಕೈ.ವೈ.ನಾರಾಯಣಸ್ವಾಮಿಯವರು ಮೂಲತಃ ಕೋಲಾರದವರು. ಕೋಲಾರ ಜಿಲ್ಲೆಯ ಮಾಸ್ತಿ ಬಳಿ ಇರುವ ಮಾಲೂರು ತಾಲೋಕಿನ ‘ಕುಪ್ಪೂರು’ ಕೆವೈಎನ್ ಅವರ ಹುಟ್ಟೂರು. ತಂದೆ-ಯಾಲಪ್ಪ ಮತ್ತು ತಾಯಿ- ಮುನಿಯಮ್ಮ. ಇವರ ಪೂರ್ಣ ಹೆಸರು ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’. ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮಾಸ್ತಿಯಲ್ಲಿ ಮುಗಿಸಿದ ನಂತರ ಬೆಂಗಳೂರಿಗೆ ಬಂದು ಪದವಿ ಶಿಕ್ಷಣ ಪಡೆದು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಮುಗಿಸುತ್ತಾರೆ. ಇವರ ಪಿ.ಎಚ್.ಡಿ ಪ್ರಬಂಧವಾದ ‘ನೀರ ದೀವಿಗೆ’ ಈ ದೇಶದ ಸಂಸ್ಕೃತಿಯನ್ನು ...
READ MORE