ಮಧ್ಯಮವರ್ಗದ ತರುಣನೊಬ್ಬ ತಾನು ಕಂಡ ಸಂಕಟಗಳಿಗೆ ರೂಪು ಕೊಟ್ಟ ಹಾಗೆ, ತಾನೇ ಪಟ್ಟ, ನೋವುಗಳನ್ನು ಹೇಳಿ ಕೊಳ್ಳಲಾಗುವುದಿಲ್ಲ. ಏಕೆಂದರೆ ಅಂಧ ತಲ್ಲಣಗಳು ಕವಿತೆಯಾಗಿ ಎಷ್ಟೋ ದಿನಗಳಾಗಿವೆ. ಆದ್ದರಿಂದ ಹಳ್ಳಿಯಲ್ಲಿ ಬದುಕುವ ಈ ಕವಿಯು ಜನರ ನೋವಿನ ಶೃತಿಗೆ ತನ್ನ ಕವಿತೆಯ ತಂತಿಗಳನ್ನು ಮಿಡಿಯಹೊರಟಿದ್ದಾರೆ.
ಇಲ್ಲಿನ ಕವನಗಳು ಬಡವರ ಮಕ್ಕಳ ಬಾಯಿಗೆ ಸಿಗದ ಸೇಬುಗಳನ್ನು ಪ್ಲೇಗಿನ ಹುಣ್ಣುಗಳೆಂದು ಕರೆಯುತ್ತವೆ. ಅಖಂಡವಾದ ಗ್ಲೋಬಿನ ಶತಖಂಡಗಳಿಗಾಗಿ ಮರುಗುತ್ತವೆ. ತಾವು ಕ್ರಮಿಸಬೇಕಾದ ಇಕ್ಕಟ್ಟಿನ ದಾರಿಯಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತಾ ಪ್ರಭಾವಗಳ ನೆರಳು ಇಲ್ಲದ ಕಡೆಗೆ ಚಲಿಸುತ್ತಿವೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE