'ಆಲಿಕಲ್ಲು' ಕವಿಯೊಬ್ಬನ ವಿಪುಲತೆಯನ್ನು ವಿಶದಿಸುತ್ತಲೇ ಸಬಾರನ್ ಲೋಕದೆಡೆಗೆ ನಮ್ಮ ಗಮನ ಸೆಳೆಯುತ್ತದೆ. ಇದು ಜೀವನದ ದೀರ್ಘಕಾಲದ ಅವಧಿಯಲ್ಲಿ ಸಿದ್ಧವಾದ ಸಂಚಯ, ಅನೇಕ ರೀತಿಯ ಅನುಭವಗಳನ್ನು ವ್ಯಾಧಿಯಾಗಿಸಿಕೊಂಡು ಮಾಡಿಸಿದ ಸಾಲುಗಳು. ಈ ಸಂಕಲನದ ಒಂದು ಮಹತ್ವದ ರಚನೆ ಬೆಳಕು ಎನ್ನುವ ಕವಿತೆ, ಕವಿತೆಯ ಆರಂಭದಲ್ಲಿ ಒಂದು ಪ್ರಶ್ನೆ ಹಾಕುತ್ತಾರೆ “ಕಿಂಡಿ, ಕಿಟಕಿ, ಕದ, ಬಾಗಿಲುಗಳ ಮುಚ್ಚಿ ಸೂರನ ಬಯಸಿದರೆ ಹೇಗೆ?” ಇದನ್ನೇ ತೆಲುಗಿನ ಕವಿ ಶಿವಾರೆಡ್ಡಿ 'ಯಾವಾಗಲು ಮನೆಯ ಕದಗಳ ತೆರೆದಿಡುವುದೆ ಚಂದ, ಯಾಕೆಂದರೆ ಕೆಲವೊಮ್ಮೆ ಸೂರ್ಯನೂ ಬರಬಹುದು ಬೆಳಕನ್ನರಸಿ’ ಎಂದು ಹೇಳುತ್ತಾನೆ. ಬಿರುಗಾಳಿ ಬೀಸಲಿ, ಸಿಡಿಲೆದ್ದು ಬಡಿಯಲಿ ಧರೆಹತ್ತಿ ಉರಿಯಲಿ, ಭುವನಬಲ ಉಡುಗಲಿ ಬಿರುಮಳೆ ಸುರಿಯಲಿ, ಮನೆಮಾರು ಮುಳುಗಲಿ ಬದುಕೆಲ್ಲ ತೂರಲಿ, ನಂಬಿದೆಲ್ಲವು ಚದುರಲಿ ಮೂಳ ದೈವ ಮುನಿಯಲಿ, ಬಂದುದೆಲ್ಲವು ಬರಲಿ ಮಣಿಯದಿರು, ಮಿಸುಗದಿರು, ಆತ್ಮಬಲ ಕುಸಿಯದಿರಲಿ ಮಂದಿರದ ಜ್ಯೋತಿ ನಂದದಿರಲಿ’, ಎಂದು ಕವಿತೆಯ ಮೂಲಕ ಮಹಾಮನೆ ಸಮಾಧಾನಿಸಿಕೊಳ್ಳುತ್ತಾರೆ.
ರಂಗಕರ್ಮಿ, ಲೇಖಕ ಡಾ. ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ (31-07-1958) ಗ್ರಾಮದವರು. ತಂದೆ- ಡಿ.ಎಸ್. ಬಸಟ್ಟಪ್ಪ, ತಾಯಿ- ಸಿ.ಆರ್. ಮಂಗಳಗೌರಮ್ಮ. ಕನ್ನಡ ಎಂ.ಎ ಪದವೀಧರರು. ಎಂ.ಪಿ.ಎ.ಎಂ.ಫಿಲ್(ಜಾನಪದ ರಂಗಭೂಮಿ) ಹಾಗೂ ಅಭಿನಯ ತರಂಗದ (ರಂಗಶಿಕ್ಷಣ) ಡಿಪ್ಲೊಮಾ ಪಡೆದಿದ್ದಾರೆ. 1976ರಲ್ಲಿ ನಾಗಮಂಗಲದ ಉದಯಭಾನು ಕಲಾಸಂಘದ ‘ಸಂಚು ಹೂಡಿದ ಸಿಂಹ’ ನಾಟಕದ ಮೂಲಕ ರಂಗಪ್ರವೇಶ ಮಾಡಿದರು. 19881ರಲ್ಲಿ ಅಭಿನಯ ತರಂಗ ಸೇರಿ, ‘ಕೋತಿಕತೆ’, ‘ಜನಮರುಳೋ’, ‘ಮಾ ನಿಷಾಧ’, ‘ಚಿರಸ್ಮರಣೆ’, ‘ಕಿಂಗ್ ಲಿಯರ್’, ‘ಟೊಳ್ಳುಗಟ್ಟಿ’, ‘ಪ್ರತಿಜ್ಞಾ ಯೌಗಂಧರಾಯಣ’ ಹಾಗೂ ಬೆಂಗಳೂರಿನ ಇತರ ತಂಡಗಳಲ್ಲಿ 30ಕ್ಕೂ ...
READ MORE