‘ಆಗಾಗ’ ಚಿ. ಶ್ರೀನಿವಾಸರಾಜು ಅವರ ರಚನೆಯ ಕವನಸಂಕಲನವಾಗಿದೆ. 'ನನಗೊಂದು ಕೈದೀವಿಗೆಬೇಕು' ಎಂದ ಸಮಾಜಕ್ಕೆ ದೊರಕಿದ್ದು ಶ್ರೀನಿವಾಸರಾಜು ಎಂಬ ಹೊತ್ತಿಗೆ. ಹುಟ್ಟಿದ್ದು 'ಚಿರಂಜೀವಿ', ಬೆಳೆದದ್ದು 'ಚಿರಂಜೀವಿ' ಸುದೀರ್ಘಕಾಲ ಕಣ್ಮುಚ್ಚಿದ್ದು ಚಿರಂಜೀವಿಯಾಗಿ, ಇಂಥ ಮನುಷ್ಯನೊಬ್ಬ ನಮ್ಮ ನಡುವೆಯಿರಬಹುದೆಂದು ತಿಳಿದಿರಲಿಲ್ಲ! ಕಂಡಿರಲಿಲ್ಲ! ಕೇಳಿರಲಿಲ್ಲ. ಒಂದೇ ಹಣತೆಯ ಬೆಳಕು ಸುತ್ತಮುತ್ತಲ ಹೊಳಹು ಬುಡದಲ್ಲಿ ನೆರಳಿಲ್ಲದ ಬೆಳಗು - ಮುಂಜಾನೆಯ ಚುಕ್ಕಿ ಬೆಳಗಾಗುತ್ತದೆಂಬ ಸಂಕೇತದ ಮೌನದಲ್ಲಿ ಮೊಳಗಿ ಅನುಕರಣೆಯಾಗಿ ಎಲ್ಲ ಮೇರೆಗಳಿಗೂ ತಿಳುಹಿದಂತೆ ಮೊಳಗಿದಂತೆ ಮನೆಮನಗಳಲ್ಲಿ ತಂಪಾಗಿ ತಿಳಿಯಾಗಿ ಅರಿವಿಗೆ ಕನ್ನಡಿಯಾಗಿ ಬದುಕಿನ ಸತ್ಯಕ್ಕೆ ಬಳುವಳಿಯಾಗಿ ಬೆಳಕಿನಲ್ಲೂ ಕೂಡಿಸಿದಂತೆ ಕಾಲದ ರಸವ ತೊಡೆವಂತೆ ಎಚ್ಚರಿಸಿದಂತೆಯಾದರೂ ಕತ್ತಲ ಚಲ್ಲಾಟಕ್ಕೆ ತಡೆಯಿಟ್ಟಂತೆ ಎಲ್ಲರಿಗೂ ಬೇಕಾಗಿ ನೆನಪಿನ ಹಾಳೆಯ ತುಂಬ ಮೌನದ ಮಳೆಗರೆದು ಹೊಸಬದುಕಿಗೆ ಹೊಸ ಚಿಗುರಿಗೆ ಹೊಚ್ಚ ಹೊಸಹಾದಿಯೆಂದರೆ ನಡೆದದ್ದೆ ಕಾಲುದಾರಿ ಹಿಡಿದ ದಿಕ್ಕೆಂದರೆ ಕಾಣುವಗುಡಿ - ಹೀಗೆ ಚಿರಂಜೀವಿ. ನಮ್ಮ ನಿಮ್ಮ ಕಾಲದ ನೆನಪಿಗೆ ಉಳಿಯುವ ಶ್ರೀರಾಜು ಮೇಷ್ಟ್ರು- ಮನುಷ್ಯ- ಮಾಂತ್ರಿಕ ಬೆಳಕು - ಕ.ವೆಂ. ರಾಜಗೋಪಾಲ
ಕನ್ನಡಕ್ಕಾಗಿ ಶ್ರಮಿಸಿದ, ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರಿಗೂ ತಲುಪುವಂತೆ ದುಡಿದ ಸಾಹಿತಿ ಚಿ. ಶ್ರೀನಿವಾಸರಾಜು. ಮೇಷ್ಟ್ರು ಎಂದೇ ಖ್ಯಾತರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ವಿ. ಚಿಕ್ಕರಾಜು, ತಾಯಿ- ಸಾವಿತ್ರಮ್ಮ. ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದು, ಹೈಸ್ಕೂಲು ಓದುವಾಗ ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು. ಆನಂತರದಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ್ದು, ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿದ್ದರು. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಓದುವ ಹಂಬಲದಿಂದ ಬಿ.ಎ, ಎಂ.ಎ. ಪದವಿ ಪಡೆದು, ಇಂಡಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನ ಕನ್ನಡ ...
READ MORE