ದೇವರು, ಧರ್ಮಗಳ ಹೆಸರಿನಲ್ಲಿ ನಡೆಯುವ ಶೋಷಣೆಯ ವಿರುದ್ಧ ವಚನಗಳ ವೈಚಾರಿಕತೆಯನ್ನು ತಳಹದಿಯಾಗಿಸಿಕೊಂಡು ಶಿವಣ್ಣ ಇಜೇರಿ ಅವರು ಬರೆದ ಕವನ ಸಂಕಲನವೇ -’ಆಧುನಿಕ ವಚನಗಳು’. ಮಾನವನ ಜೀವನ ಸಾರ್ಥಕತೆಗೆ ಶರಣರ ವಚನಗಳ ಪಾಲನೆ ಅಗತ್ಯ ಹಾಗೂ ಅನಿವಾರ್ಯ ಎಂದೇ ಇಲ್ಲಿಯ ಬಹುತೇಕ ಕವನಗಳು ಸಮರ್ಥಿಸಿಕೊಳ್ಳುತ್ತವೆ. ಪ್ರತಿ ಕವನವು ಪ್ರಖರ ವಿಚಾರಗಳನ್ನು ಒಳಗೊಂಡಿದೆ. ವೈಜ್ಞಾನಿಕ -ವೈಚಾರಿಕ ವಿಚಾರಗಳಿಲ್ಲದ ಬದುಕಿನ ಬಗ್ಗೆ ಕವಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಸಾಮಾಜಿಕ-ಧಾರ್ಮಿಕ ಶೋಷಣೆಗಳ ವಿರುದ್ಧ ನಡೆಸಿದ ಶರಣರ ಬದುಕನ್ನು ಇಲ್ಲಿಯ ಕವಿತೆಗಳು ಗಾಢವಾಗಿ ಅಪ್ಪಿಕೊಳ್ಳುತ್ತವೆ.
ಶಹಾಪುರದ ಅಡತಿ ಅಂಗಡಿವೊಂದರಲ್ಲಿ ಗುಮಾಸ್ತರಾದ ಶಿವಣ್ಣ ಇಜೇರಿ ಅವರು ಸಾಹಿತ್ಯಾಸಕ್ತರು. ವಚನ ಸಾಹಿತ್ಯ ತತ್ವ ಅನುಯಾಯಿ. ಉಡಿಯಲ್ಲಿಯ ಉರಿ, ಆಧುನಿಕ ವಚನಗಳು , ಕರಗದ ಬೆಣ್ಣೆ ಹೀಗೆ 5 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರಣರ ವಚನಗಳ ವಿಶ್ಲೇಷಕರು. ’ಬಸವ ಮಾರ್ಗ’ ಮಾಸಿಕದಲ್ಲಿ ಲೇಖಕರು. ಶರಣರ ವಿಚಾರ ಪ್ರಸಾರ-ಪ್ರಚಾರಕ್ಕಾಗಿ ಹಿರಿಯ ಸಾಹಿತಿ ದಿ.ಲಿಂಗಣ್ಣ ಸತ್ಯಂಪೇಟೆ ಅವರು ಬಸವ ಮಾರ್ಗ ಪ್ರತಿಷ್ಠಾನದಿಂದ ಆರಂಭಿಸಿದ”ಮನೆಯಲ್ಲಿ ಮಹಾಮನೆ’ ಚಿಂತನಾ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ...
READ MORE