ಆಚೆ ಈಚೆ

Author : ಪೂರೀಗಾಲಿ ಮರಡೇಶಮೂರ್ತಿ

Pages 200

₹ 150.00




Year of Publication: 2016
Published by: ಲಿಖಿತ ಸ್ವರೂಪ್ ಪಬ್ಲಿಕೇಷನ್
Address: #06, 2ನೇ ಮಹಡಿ, ಅಲ್ಲಮಪ್ರಭು ಸಂಕೀರ್ಣ, ವೀರಶೈವ ಅನಾಥಾಲಯ ಕಟ್ಟಡ, 5ನೇ ಅಡ್ಡರಸ್ತೆ, ರಾಮಾನುಜ ರಸ್ತೆ, ರಾಜೇಂದ್ರ ಕಲಾಮಂದಿರ ಎದುರು, ಮೈಸೂರು
Phone: 9449526390

Synopsys

'ಆಚೆ ಈಚೆ '- ಸುಮಾರು 93 ಕವಿತೆಗಳುಳ್ಳ ಈ ಸಂಕಲನ ಬದುಕಿನ 'ಆಚೆ ಈಚೆ ' ತೆರೆದಿಡುತ್ತದೆ. ಪೂರೀಗಾಲಿ ಮರಡೇಶಮೂರ್ತಿ ಕವಿಗಳು. ಬದುಕು ದೊಡ್ಡದೆ. ಈ ಎಲ್ಲ ಕಾರಣಕ್ಕಾಗಿ ಪ್ರತಿಯೊಬ್ಬರ ಜೀವನದ ಪ್ರತಿಕ್ಷಣಗಳನ್ನು ಅಣಿ ಮುತ್ತುಗಳಾಗಿಯೇ ನೋಡಬೇಕಾಗುತ್ತದೆ ಎಂಬ ಆಶಯ ಇಲ್ಲಿಯ ಕವನಗಳದ್ದು.

ಬದುಕು ಬವಣೆ, ನೋವು ನಲಿವು, ಸಿರಿತನ ಬಡತನ, ಸುಖದುಃಖ ಹೀಗೆ ಸಂವೇದನೆಯ ಮೂರ್ತರೂಪಗಳನ್ನು ಈ ಸಾಮಾಜಿಕ ನೆಲೆಗಟ್ಟಿನಲ್ಲಿ ಈ ಕವನಗಳು ತೆರೆದಿಡುತ್ತವೆ.  ಸೀದಾಸಾದಾ ಜನರ ಬದುಕಿನ ಅನಾವರಣವಾಗಿದೆ. ವಾಸ್ತವವಾಗಿ 'ಧಾರಾವಿ ' ಯಂತಹ ಜನರನ್ನು ಅವರ ಜೀವನವನ್ನು, ಬದಲಿಸಬೇಕಾದ ಅವರ ಅವರ ಬದುಕನ್ನು, ಚಿಂತಿಸುವ ಚಿತ್ರಿಸುವ ಕೆಲಸವಾಗಬೇಕು. ಇಂತಹ ನೂರಾರು ಕನಸುಗಳನ್ನು ಕಾಳಜಿ ಮಾಡುವ ಪ್ರಯತ್ನವೇ ಆಚೆ ಈಚೆ .ಜಾತಿ ಮರ , ನೆಲವೆಲ್ಲ ಚೂರಾಗಿ, 'ಧಾರಾವಿಗೆ ಬನ್ನಿ , ಸೂಳೆಕೆರೆ ,ಹೊಸ ಕ್ರಾಂತಿ, ಅನಾವರಣ, ಬಣ್ಣ ಬಣ್ಣದ ಬದುಕು , ಒಡಲ ಗರ್ಭಸೀಳಿ, ದೇವರ ಪಟ , ಕೊಳಗೇರಿ ಕಥೆಗಳು, ಅನ್ನಕ್ಕೆ ಹಸಿವು , ಕಾಸು ಕುಣಿತೈತೆ ಮುಂತಾದ ಕವನಗಳೇ 'ಆಚೆ ಈಚೆ 'ಯ ಹೃದ್ಯ ತೆರೆದಿಡುವ ಝಲಕ್ ಗಳು.

 

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books