ಕನ್ನಡದ ವಿಶಿಷ್ಟ ಕವಿ ಎ.ಕೆ. ರಾಮಾನುಜನ್. ತಮ್ಮ ಅಪರೂಪದ ವಿಶಿಷ್ಟ ’ರಾಮಾನುಜನ್ ಛಂದಸ್ಸಿ’ನ ಕವಿತೆಗಳ ಗಮನ ಸೆಳೆದವರು ರಾಮಾನುಜನ್. ಅವರ ಕವಿತೆಗಳು ನೋಡಲು-ಓದಲು-ಕೇಳಲು ಸೊಗಸು. ಪದಗಳ ಮೂಲಕ ಆಟವಾಡುತ್ತಲೇ ವಿಭಿನ್ನ ಅನುಭವಲೋಕವನ್ನು ರಾಮಾನುಜನ್ ತೆರೆದಿಡಬಲ್ಲರು. ಹೊಕ್ಕುಳಲ್ಲಿ ಹೂವಿಲ್ಲ. ಕುಂಟೋಬಿಲ್ಲೆ ಮತ್ತು ಇತರ ಪದ್ಯಗಳ ಎಂಬ ಮೂರು ಕನ್ನಡ ಕವನ ಸಂಕಲನಗಳನ್ನು ರಾಮಾನುಜನ್ ಪ್ರಕಟಿಸಿದ್ದಾರೆ. ರಾಮಾನುಜನ್ ಅವರ ಆಯ್ದ ಮತ್ತು ಪ್ರಾತಿನಿಧಿಕ ಕವಿತೆಗಳ ಸಂಕಲನ ಇದು.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರಹಗಾರರೆನಿಸಿದ್ದಾರೆ. ಮಾರ್ಚ್ 16, 1929 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಮತ್ತು ಎಂ.ಎ.ಪದವಿಯನ್ನು ಗಳಿಸಿದ ರಾಮಾನುಜನ್ ಅವರು ದಕ್ಷಿಣ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ, 1958ರ ವರ್ಷದಲ್ಲಿ ಪುಣೆಯ ಡೆಕ್ಕನ್ ವಿಶ್ವವಿದ್ಯಾಲಯದಿಂದ ‘ಥಿಯೇಟ್ರಿಕಲ್ ಲಿಂಗ್ವಿಸ್ಟಿಕ್ಸ್’ ವಿಷಯದಲ್ಲಿ ಉನ್ನತ ಡಿಪ್ಲೋಮಾ ಪದವಿ ಪಡೆದರು. ಮುಂದಿನ ವರ್ಷದಲ್ಲಿ ಅಮೆರಿಕಕ್ಕೆ ತೆರಳಿದ ರಾಮಾನುಜನ್ 1963ರ ವರ್ಷದಲ್ಲಿ ಅಮೆರಿಕ ಇಂಡಿಯಾನ ವಿಶ್ವವಿದ್ಯಾನಿಲಯದಿಂದ ಭಾಷಾವಿಜ್ಞಾನದ ಪಿ.ಎಚ್.ಡಿ ಗೌರವವನ್ನು ಗಳಿಸಿದರು.ರಾಮಾನುಜನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ...
READ MORE