ಲೇಖಕ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಅವರು ಮೂಲತಃ (ಜನನ: 01-06- 1989) ತಂದೆ - ಆರ್.ಪ್ರಕಾಶಗೌಡ ತಾಯಿ - ಆರ್.ಅನ್ನಪೂರ್ಣಮ್ಮ. ಬೈರಗಾಮದಿನ್ನೆ ಹಾಗೂ ಕೊತ್ತಲಚಿಂತಾದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ, ಬಳ್ಳಾರಿಯಲ್ಲಿ ಪಿಯು ಕಾಲೇಜು ನಂತರ ಡಿ.ಎಡ್, ತದನಂತರ ಬಿ.ಎ. ಪದವಿ ಪಡೆದರು. ಕನ್ನಡ ವಿ.ವಿ.ಯಿಂದ ಡಿಪ್ಲೊಮಾ ಇನ್ ಡ್ರಾಮಾ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್, ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷೆಯಲ್ಲಿ ನಾಟಕ ಕಲೆ ವಿಷಯದಲ್ಲಿ ರಾಜ್ಯಕ್ಕೆ ಅತಿಹೆಚ್ಚು ಅಂಕ ಗಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಿಂದ ನಾಟಕ ಕಲೆಯ ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಅಂಕ ಗಳಿಸಿ "ಚಿನ್ನದ ಪದಕ"ಪಡೆದಿದ್ದಾರೆ.
ಪ್ರಶಸ್ತಿಗಳು : ಬಳ್ಳಾರಿ ಜಿಲ್ಲಾ ಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ 4 ಬಾರಿ ಪ್ರಥಮ ಬಹುಮಾನ., ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ 2 ಬಾರಿ ತೃತೀಯ ಬಹುಮಾನ.
ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ನೀಡುವ "ಹಂಪಿ ಉತ್ಸವ ಪ್ರಶಸ್ತಿ, ಉದಯ ಟಿವಿ ಬಳ್ಳಾರಿಯಲ್ಲಿ ನಡೆಸಿದ ಮಾತಿನ ಮಂಟಪ ರಿಯಾಲಿಟಿ ಕಾರ್ಯಕ್ರಮದಿಂದ "ಮಾತಿನ ಮಲ್ಲ"ಪ್ರಶಸ್ತಿ, ಧಾರವಾಡ ಮತ್ತು ಬೆಂಗಳೂರು ಆಕಾಶವಾಣಿ ಕೇಂದ್ರಗಳಲ್ಲಿ ಕವಿತಾ ವಾಚನ, ದೂರದರ್ಶನ ಚಂದನ ವಾಹಿನಿಯ ಥಟ್ ಅಂತಾ ಹೇಳಿ ಕಾರ್ಯಕ್ರಮದಲ್ಲಿ ಭಾಗಿ, ಡೊಳ್ಳು ಕುಣಿತ,ರಂಗಗೀತೆ ಗಾಯನದಲ್ಲಿ ಭಾಗಿ, ವಿಶಾಖಪಟ್ಟಣದಲ್ಲಿ ನಡೆದ ರಸಜ್ಞ ರಾಷ್ಟ್ರೀಯ ನಾಟಕೋತ್ಸವದಲ್ಲಿ 2 ಬಾರಿ ಭಾಗಿ, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಲಾ ಮತ್ತು ಸಾಹಿತ್ಯ ಕೃಷಿಗಾಗಿ ಸನ್ಮಾನ, ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಥಿಯೇಟರ್ ಒಲಂಪಿಕ್ ನಲ್ಲಿ ಭಾಗಿ, ದೆಹಲಿಯ ಥಿಯೇಟರ್ ಒಲಂಪಿಕ್ ನಲ್ಲಿ ಭಾಗಿ, ನೆಲಸೊಗಡು ಬೆಂಗಳೂರು ವತಿಯಿಂದ "ಕಲಾ ಕುಸುಮ" ಪ್ರಶಸ್ತಿ ಪ್ರದಾನ, ಕಾರಂತ ರಂಗಲೋಕ..ಕಲಾತ್ಮಕ ಮನಸ್ಸುಗಳ ತಾಣ..! ಎಂಬ ಕಲಾ ಸಂಸ್ಥೆಯನ್ನು ಕಟ್ಟಿದ್ದಾರೆ.