About the Author

ಸುಮಿತ್ ಮೇತ್ರಿ- ವಿಜಯಪುರ ಜಿಲ್ಲೆಯ ಹಲಸಂಗಿಯಲ್ಲಿ 1986ರಲ್ಲಿ ಜನಿಸಿದರು. ತಂದೆ ಗಣಪತಿ, ತಾಯಿ ಗಂಗಾಬಾಯಿ ವಿಜ್ಞಾನ ಶಿಕ್ಷಕರಾದ ಇವರು ಪ್ರಸ್ತುತ ರಾಯಚೂರು ಜಿಲ್ಲೆ ದೇವದುರ್ಗದ ಕಜ್ಜಿಬಂಡಿ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲಸಂಗಿ, ವಿಜಯಪುರ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ.

ಓದು-ಬರಹ, ಕಾವ್ಯ, ಕಾಡು, ಸುತ್ತಾಟ ಇವರ ಅಭಿರುಚಿ. ಮೌನ, ಧ್ಯಾನ ಅಂದರೆ ಬಲು ಇಷ್ಟ ಎನ್ನುವ ಇವರು ಏಕಾಂತ ಅವರ ಪಾಲಿನ ಸ್ವರ್ಗ ಎನ್ನುತ್ತಾರೆ. ಓದು, ಬರಹದ ಜೊತೆಗೆ ಪೋಟೋಗ್ರಫಿ ಸುಮಿತ್ ಅವರ ಮೆಚ್ಚಿನ ಹವ್ಯಾಸಗಳನ್ನೊಂದು. ರಾಜ್ಯ ಮಟ್ಟದ ವಿಜ್ಞಾನ ಆವಿಷ್ಕಾರಗಳಲ್ಲಿ ತೊಡಗಿಕೊಂಡಿದ್ದು, ಅನೇಕ ಇಲಾಖಾ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಸರ್ಕಾರಿ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಬಳಗದೊಂದಿಗೆ ಕ್ರಿಯಾಶೀಲರಾಗಿರುವ ಇವರು " ಸುಗಮ " ಅಂತರ್ಜಾಲ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುದೀರ್ಘ ಕಾಲ ಕಾವ್ಯದೊಂದಿಗೆ ಜೀವಿಸಿದ ತರುವಾಯು ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ ಎಂಬ ಚೊಚ್ಚಲ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2019ನೇ ಸಾಲಿನ ಅತ್ಯುತ್ತಮ ಕೃತಿ ಪ್ರಶಸ್ತಿ ದೊರೆತಿದೆ. 

ಸುಮಿತ್ ಮೇತ್ರಿ

(14 Sep 1986)

Awards

Stories/Poems