About the Author

ಲೇಖಕ ಡಾ. ಶೈಲೇಶ್ ಕುಮಾರ್ ಶಿವಕುಮಾರ್ ಅವರು ಐಟಿ ಉದ್ಯೋಗಿಯಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಬೆಂಗಳೂರು ವಿವಿಯಿಂದ ಕಂಪ್ಯೂಟರ್‌ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಹಾಗೂ ಪಿಎಚ್‌ಡಿ ಪದವಿ ಅಲ್ಲದೇ ಇನ್‌ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಹಲವು ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಶೈಲೇಶ್ ಕುಮಾರ್ ಅವರು ಪ್ರಸ್ತುತ ಅಮೆಜಾನ್ ಕಂಪೆನಿ ಯಲ್ಲಿ ಸೊಲ್ಯೂಷನ್ಸ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಶೋಧನೆ, ಪುಸ್ತಕ ಬರವಣಿಗೆ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಆಸಕ್ತಿಯುಳ್ಳ ಇವರು ಈವರೆಗೂ, 9 ತಾಂತ್ರಿಕ ಪುಸ್ತಕ, ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇವರ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಅವರು ಬರೆದಿರುವ 39 ಪಠ್ಯಪುಸ್ತಕ ಅಧ್ಯಾಯಗಳು ಪಠ್ಯವಾಗಿವೆ. ಅವರು ತಮ್ಮ ಸಂಶೋಧನೆಗಾಗಿ ಎರಡು ಅಮೆರಿಕೆಯ ಪೇಟೆಂಟ್‌ಗಳನ್ನು ಹೊಂದಿದ್ದಾರೆ. 

ಪ್ರಶಸ್ತಿಗಳು: ‘ಅನುವಾದವೆಂಬೋ ಸಂಬಂಧ’ ಕವನ ಸಂಕಲನ 2024ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

ಶೈಲೇಶ್ ಕುಮಾರ್