ಬೆಂಗಳೂರು ಮೂಲದವರಾದ ಜಾನಕಿ ಶ್ರೀನಿವಾಸ್ ಸಣ್ಣ ಕತೆಗಳಲ್ಲಿ ಹೆಸರು ಮಾಡಿರುವ ದಿ.ಕೆ.ಗೋಪಾಲಕೃಷ್ಣರಾಯರ ಮಗಳು. 28-08-1952 ರಂದು ಜನಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಗುರುಕುಲಂನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಗಾಂಧೀಬಜಾರ್ ನ ಚಿನ್ನಿ ಸ್ಕೂಲ್ ನಲ್ಲಿ ಮಧ್ಯಮ, ಗಿರಿಜಾಂಬ ಮುಕುಂದ ದಾಸ್ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ವ್ಯಾಸಂಗ ಪೂರ್ತಿಗೊಳಿಸಿದರು. ಪಿಯುಸಿಯನ್ನು ಎಪಿಎಸ್ ಕಾಲೇಜು, ವಿಜಯ ಕಾಲೇಜಿನಲ್ಲಿ ಬಿ.ಎ ಹಾನರ್ಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ ಶಿಕ್ಷಣ ಗಳಿಸಿದರು.
ತಮ್ಮ 60ನೇ ವಯಸ್ಸಿನಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಅವರು ಕಥೆಯೊಳಗೇಳು ಕಥೆ, ಸಂಪತ್ ಮತ್ತು ಇತರ ಕತೆಗಳು ಎಂಬ ಎರಡು ಸಣ್ಣಕತೆಗಳನ್ನು ರಚಿಸಿದ್ದಾರೆ. ಅಲ್ಲದೆ ಪ್ರವಾಸ ಕಥನವೊಂದನ್ನು ಬರೆದು ಪ್ರಕಟಿಸಿದ್ದಾರೆ. ವಿವಾಹದ ನಂತರ ಗೋವಾದಲ್ಲಿ ನೆಲೆಸಿದ ಅವರು ಗೋವಾದ ಕನ್ನಡ ಸಂಘದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ ವೀಣೆ ಕಲಿಕೆ, ವೀಣೆ ಹೇಳಿಕೊಡುವುದರ ಜೊತಗೆ ಪೈಂಟಿಂಗ್,ನಿಟ್ಟಿಂಗ್ ನಂತಹ ಹವ್ಯಾಸಗಳನ್ನೇ ನೆಚ್ಚಿಕೊಂಡಿದ್ದಾರೆ.