ಲೇಖಕ ವೆಂಕಟೇಶ್, ಎಸ್. ಆರ್ ಅವರು ತುಮಕೂರು ವಿಶ್ವ ವಿದ್ಯಾಲಯದಿಂದ (ಕನ್ನಡ) ಎಂ.ಎ. ಪದವೀಧರರು. ಓದು - ಬರಹ,ಕಾವ್ಯ,ಫೋಟೋಗ್ರಫಿ, ಕ್ರೀಡೆ, ಸಾಹಿತ್ಯದ ಬಳಗ ಕಟ್ಟುವುದು ಇವರ ಅಭಿರುಚಿ. 2014 ನೇ ಸಾಲಿನ ದ.ರಾ.ಬೇಂದ್ರೆ ಕಾವ್ಯ ಕೂಟ, ಬೇಂದ್ರೆ ಸ್ಮತಿ ಲೇಖನ ಸ್ಪರ್ಧೆ-7 ರಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ‘ಕಾವ್ಯದಹುಳು -ಕಾವ್ಯ ಕಟ್ಟೋಣ ಬನ್ನಿ’ ಸಾಹಿತ್ಯದ ಬಳಗವನ್ನು ಕಟ್ಟಿ ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ತುಮಕೂರಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.