ಶ್ರೀ ಬಿ.ವಿ.ರಾವ್ (ಬಪ್ಪನಾಡು ವಿಜಯ್ ಕುಮಾರ್) ಅವರು ದಿನಾಂಕ: 25\ 09\1946 ರಂದು ಮಂಗಳೂರು ಜಿಲ್ಲೆಯ ಕಿನ್ನಿಗೋಳಿನಲ್ಲಿ ಜನಿಸಿದರು. ಕಿನ್ನಿಗೋಳಿಯ ಪಾಂಪೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿತ ಮೇಲೆ ಬಿ.ವಿ.ರಾಯರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪಿ.ಯು.ಸಿ ಮಾಡಿ ಉನ್ನತ ಅಂಕಗಳನ್ನು ಗಳಿಸಿ ಸುರತ್ಕಲ್ಲಿನ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ( ಆಗ KREC ಮತ್ತು ಈಗ NITK) 1968ರಲ್ಲಿ ಬಿ.ಇ. ಮೆಕ್ಯಾನಿಕಲ್ ಮಾಡಿದರು. ಶ್ರೇಷ್ಠ ಇಂಜಿನಿಯರಾಗಿದ್ದು ಕವಿಗಳಾಗಿರುವುದು ಇವರ ವಿಶೇಷ ಸಾಧನೆ. ಇವರು ನಚಿಕೇತ ಮನೋವಿಕಾಸ ಕೇಂದ್ರ, ವಿಜಯನಗರ, ಬೆಂಗಳೂರು, ಇದರ ಸಂಸ್ಥಾಪಕರು ಹಾಗೂ ಪ್ರಸ್ತು ಅಧ್ಯಕ್ಷರಾಗಿದ್ದಾರೆ.