ಬಸವರಾಜ ಮಡಿವಾಳಪ್ಪ ಕೆಂಧೂಳಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹುಣಸ್ಯಾಳ ( 01-04-1953) ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಹಳ್ಳುರಿನಲ್ಲಿ ಹೈಸ್ಕೂಲ್ ಶಿಕ್ಷಣ, ವಿಜಯಪುರದಲ್ಲಿ ಪದವಿ ಪೂರೈಸಿದರು. ರಬಕವಿಯ ಎಂ.ವಿ. ಪಟ್ಟಣ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ಜಾನಪದ ಸಾಹಿತ್ಯದೆಡೆಗೆ ಒಲವು. ಜಾನಪದ ಹಾಡುಗಳ ಸುಮಾರು 42 ಧ್ವನಿ ಸುರುಳಿಗಳು ಬಂದಿವೆ. ಪದ್ಯ ಹಾಡಿ ಬುದ್ಧಿ ಕಲಿಸ್ಯಾರ-ಎಂಬುದು ಇವರ ಕವನ ಸಂಕಲನ. ಬೆಂಗಳೂರಿನ ಅಂತಾರಾಷ್ಟ್ರೀ ಸಾಮಾಜಿಕ ಅಭಿವೃದ್ಧಿ ಸಂಘದವರು ನೀಡುವ ಡಾ. ಅಬ್ದುಲ್ ಕಲಾಂ ಲೈಫ್ ಟ್‌ಐಮ್ ಅಚ್ಯುವ್ ಮೆಂಟ್ ಪ್ರಶಸ್ತಿ, ಇಲಕಲ್ ಮಹಾಂತ ಸ್ವಾಮಿಗಳಿಂದ ಬಸವ ಭೂಷಣ ಪ್ರಶಸ್ತಿ, ಬಳ್ಳಾರಿಯ ಸ್ಫೂರ್ತಿ ಕಲಾವಿದರ ಸಂಘದಿಂದ ಗಾನ ಕೋಗಿಲೆ ಪ್ರಶಸ್ತಿ, ಹುಬ್ಬಳ್ಳಿಯ ಪ್ರೊಬಸ್ ಕ್ಲಬ್ ದಿಂದ ಸಿರಿಕಂಠ ಪ್ರಶಸ್ತಿ ಲಭಿಸಿವೆ.