About the Author

ಶಿಕ್ಷಕ, ಹವ್ಯಾಸಿ ಬರಹಗಾರ ರವಿರಾಜ್ ಸಾಗರ್ ಎಂತಲೇ ಪರಿಚಿತರಾಗಿರುವ ರವಿಚಂದ್ರ ಡಿ. ಅವರು 1986 ಜುಲೈ 19 ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಂಡಗಳಲೆ ಗ್ರಾಮದವರಾದ ಇವರು ಪ್ರಸ್ತುತ ರಾಯಚೂರಿನ ಮಾನ್ವಿ ತಾಲ್ಲೂಕಿನ ಮಲ್ಕಾಪುರ ಸರ್ಕಾರಿ ಶಾಲೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  

ಕಾಲೇಜು ದಿನಗಳಿಂದಲೇ  ಬರೆಯುವ ಹವ್ಯಾಸ ಬೆಳೆಸಿಕೊಂಡ ರವಿಚಂದ್ರ ಇವರು ಪತ್ರಿಕೋದ್ಯಮ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಯ ಜೊತೆಗೆ ಜಾನಪದ ಸಂಪಾದನೆ, ಫೋಟೋಗ್ರಫಿಯಲ್ಲಿಯೂ ತೊಡಗಿಕೊಂಡಿದ್ದಾರೆ.

ಮಲ್ಕಾಪುರ ಸರ್ಕಾರಿ ಶಾಲೆಯ ಮಕ್ಕಳು ಹೊರತರುತ್ತಿರುವ ಮಂದಾರ ಕನ್ನಡ ಮಕ್ಕಳ ಪತ್ರಿಕೆಯನ್ನು ಸಂಪಾದಕರು ಆಗಿದ್ದಾರೆ. ನರಲೇಲೆ (ಕವನ ಸಂಕಲನ), ಮಂದಾರ ಮಾಲೆ, ನಮ್ಮೂರ ಜಾನಪದ ಸಿರಿ, ನಮ್ಮೂರ ಜಾನಪದ ಅನುಸಂಧಾನ ಸಂಪಾದಿತ ಕೃತಿಗಳಾಗಿವೆ.

ರವಿರಾಜ್ ಅವರಿಗೆ ಶಿಕ್ಷಕ ರತ್ನ, ಸೃಜನ ಬಾಲ ಸಾಹಿತ್ಯ ಪುರಸ್ಕಾರ ಪಡೆದಿದ್ದಾರೆ. ಮಕ್ಕಳ ಸಾಹಿತ್ಯ ಪರಿಷತ್ ಮಸ್ಕಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಬಳಗದ ರಾಯಚೂರು ಜಿಲ್ಲಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ರವಿರಾಜ್ ಸಾಗರ್

(19 Jul 1986)

BY THE AUTHOR